ನವದೆಹಲಿ: ಪ್ರಧಾನಿ ಮೋದಿ ಅವರ ಕಡಿಮೆ ವಿದ್ಯಾರ್ಹತೆಯು ದೇಶದ ಪಾಲಿಗೆ ಅಪಾಯಕಾರಿ ಎಂದು ಆಮ್ ಆದ್ಮಿ ನಾಯಕ, ಸದ್ಯ ಜೈಲಿನಲ್ಲಿರುವ ಮನೀಶ್ ಸಿಸೋಡಿಯ ಹೇಳಿದ್ದಾರೆ.
ಆರ್ ಟಿ ಮೂಲಕ ಪ್ರಧಾನಿಯ ವಿದ್ಯಾರ್ಹತೆ ಬಗ್ಗೆ ಮಾಹಿತಿ ಕೇಳಿದ್ದ ಅರವಿಂದ್ ಕೇಜ್ರಿವಾಲ್ ಅವರಿಗೆ ಇತ್ತೀಚಿಗಷ್ಟೇ ಗುಜರಾತ್ ಹೈಕೋರ್ಟ್ ದಂಡ ವಿಧಿಸಿತ್ತು.
ಇದೀಗ ಜೈಲಿನಿಂದಲೇ ಪತ್ರ ಬರೆದಿರುವ ಮನೀಶ್ ಸಿಸೋಡಿಯಾ, “ಇಂದಿನ ಯುವಜನತೆ ಏನನ್ನಾದರೂ ಮಾಡಲು ಬಯಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಲು ಬಯಸುತ್ತಾರೆ. ಕಡಿಮೆ ವಿದ್ಯಾರ್ಹತೆ ಇರುವ ಪ್ರಧಾನಿಗೆ ಈ ಯುವ ಜನತೆಯ ಕನಸುಗಳನ್ನು ಈಡೇರಿಸಲು ಸಾಧ್ಯವಿದೆಯೇ?” ಎಂದು ಪ್ರಶ್ನಿಸಿದ್ದಾರೆ.