Thursday, March 27, 2025
Homeಟಾಪ್ ನ್ಯೂಸ್ಮಾರ್ಚ್‌ 25ಕ್ಕೆ ವಿಜಯಸಂಕಲ್ಪ ಯಾತ್ರೆ ಸಮಾರೋಪ : ಮೋದಿ ನೇತೃತ್ವದಲ್ಲಿ ಮೊಳಗಲಿದೆ ಕಹಳೆ

ಮಾರ್ಚ್‌ 25ಕ್ಕೆ ವಿಜಯಸಂಕಲ್ಪ ಯಾತ್ರೆ ಸಮಾರೋಪ : ಮೋದಿ ನೇತೃತ್ವದಲ್ಲಿ ಮೊಳಗಲಿದೆ ಕಹಳೆ

ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮತಬೇಟೆಯ ಚಟುವಟಿಕೆ ಚುರುಕಾಗಿದೆ. ಪ್ರಮುಖ ಪಕ್ಷಗಳ ಘಟಾನುಘಟಿ ನಾಯಕರು ಕರ್ನಾಟಕಕ್ಕೆ ಮೇಲಿಂದ ಮೇಲೆ ಆಗಮಿಸುತ್ತಿದ್ದು ಮತದಾರನ ಮನಮುಟ್ಟಲು ಕಸರತ್ತು ನಡೆಸ್ತಿದ್ದಾರೆ.

ಪ್ರಜಾಧ್ವನಿ ಯಾಥ್ರೆಯ ಮೂಲಕ ಕಾಂಗ್ರೆಸ್ ಮತಬೇಟೆ ಮಾಡುತ್ತಿದ್ರೆ ಇತ್ತ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯದುದ್ದಗಲಕ್ಕೂ ಚುನಾವಣಾ ಪ್ರಚಾರ ಮಾಡುತ್ತಿದೆ. ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಈ ಬಾರಿಯೂ ಮತ ಯಾಚಿಸುತ್ತಿರುವ ಬಿಜೆಪಿ ಮೋದಿಯವರನ್ನು ಮತ್ತೆ ರಾಜ್ಯಕ್ಕೆ ಕರೆತರುತ್ತಿದೆ

ಬಿಜೆಪಿ ವರಿಷ್ಠ ನಾಯಕ ಮೋದಿ ರಾಜ್ಯಯದಲ್ಲಿ ನಡೆಯಲಿರುವ ವಿಜಯಸಂಕಲ್ಪ ಮಹಾಸಂಗಮ ಸಮಾರೋಪದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ನಾಲ್ಕು ಕಡೆಯಿಂದ ಪ್ರಾರಂಭವಾಗಿ, 224 ಕ್ಷೇತ್ರಗಳನ್ನು ತಲುಪಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ದಾವಣಗೆರೆಯಲ್ಲಿ ಮಾರ್ಚ್‌ 25 ರಂದು ಅಂತ್ಯಗೊಳ್ಳಲಿದೆ. ಈ ಮಹಾ ಸಂಗಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ.

ಕರ್ನಾಟಕದಲ್ಲಿ ಇಷ್ಟು ದೊಡ್ಡ ರಾಜಕೀಯ ಮಹಾಸಂಗಮವನ್ನು ಯಾವುದೇ ಪಕ್ಷವೂ ಮಾಡಿಲ್ಲ ಎಂದು ಹಿರಿಯ ನಾಯಕ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ದಾವಣಗೆರೆಯ ಜಿಎಂಐಟಿ ಕಾಲೇಜು ಬಳಿ ಸುಮಾರು 400 ಎಕರೆ ಪ್ರದೇಶದ ಪೈಕಿ 40 ಎಕರೆಯಲ್ಲಿ ಈ ಮಹಾಸಂಗಮಕ್ಕೆಂದೆ ವಿಶಾಲ ವೇದಿಕೆ, ಪೆಂಡಾಲ್‌ ನಿರ್ಮಾಣವಾಗಿದ್ದು, ಸುಮಾರು 10 ಲಕ್ಷ ಬಿಜೆಪಿ ಕಾರ್ಯಕರ್ತರು ಬಂದು ಸೇರುವ ನಿರೀಕ್ಷೆ ಇದೆ.

ಹೆಚ್ಚಿನ ಸುದ್ದಿ

error: Content is protected !!