ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಮಂತ್ರಿ ಫ್ಯೂಮಿಯೊ ಕಿಶಿದಾ ಜೊತೆ ಗೋಲ್‌ಗಪ್ಪಾ ಅಂದ್ರೆ ಪಾನಿಪುರಿ ಸವಿದರು.
ನವದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿ ವಿಹರಿಸುತ್ತಾ ಭಾರತ ಮತ್ತು ಜಪಾನ್ ನಡುವಿನ ಸಾಂಸ್ಕೃತಿಕ ಹಾಗೂ ವ್ಯಾಪಾರ ಬಂಧವನ್ನು ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಸಿದ ಉಭಯ ನಾಯಕರು ಗೋಲ್‌ಗಪ್ಪಾ, ಫ್ರೈಡ್ ಇಡ್ಲಿ ಹಾಗೂ ಮಾವಿನ ಲಸ್ಸಿ ಸವಿದರು.
ಜಪಾನ್ ಪ್ರಧಾನಮಂತ್ರಿಗಳು ಭಾರತದೊಂದಿಗೆ, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ ಮತ್ತು ತಂತ್ರಜ್ಞಾನ ವಲಯದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಆಗಮಿಸಿರುವ ಕಿಶಿದಾ ರವರ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು