Friday, December 5, 2025
Homeಟಾಪ್ ನ್ಯೂಸ್ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಿಬಿಐ ಪಾತ್ರ ದೊಡ್ಡದು: ನರೇಂದ್ರ ಮೋದಿ

ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಿಬಿಐ ಪಾತ್ರ ದೊಡ್ಡದು: ನರೇಂದ್ರ ಮೋದಿ

ನವದೆಹಲಿ: ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕೆ ಭ್ರಷ್ಟಾಚಾರವು ಅತಿದೊಡ್ಡ ತಡೆಯಾಗಿದೆ, ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಸಿಬಿಐನ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಕೇಂದ್ರೀಯ ತನಿಖಾ ದಳದ (CBI) ವಜ್ರಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಬಿಐ ಜನರ ವಿಶ್ವಾಸವನ್ನು ಗೆದ್ದಿದೆ. ಏನಾದರೂ ತನಿಖೆ ಬಂದರೆ ಜನರು ಅದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಬಯಸುತ್ತಾರೆ.ಯಾಕೆಂದರೆ ಅವರಿಗೆ ಅದರ ಮೇಲೆ ಅಷ್ಟೊಂದು ವಿಶ್ವಾಸವಿದೆ. ಈ ರೀತಿ ಜನರ ನಂಬುಗೆ ಪಡೆಯುವುದು ಅಷ್ಟೊಂದು ಸುಲಭವಲ್ಲ. ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಸಿಬಿಐನ ಪಾತ್ರ ದೊಡ್ಡದು ಎಂದು ಹೇಳಿದರು.

ಕಳೆದ ಆರು ದಶಕಗಳಲ್ಲಿ ಸಿಬಿಐ ಬಹು ಆಯಾಮದ ಮತ್ತು ಬಹು-ಶಿಸ್ತಿನ ತನಿಖಾ ಸಂಸ್ಥೆಯಾಗಿ ಮನ್ನಣೆ ಗಳಿಸಿದೆ. ಆಧುನಿಕ ತಂತ್ರಜ್ಞಾನಗಳಿಂದಾಗಿ ಇಂದು ಅಪರಾಧಗಳು ಜಾಗತಿಕವಾಗುತ್ತಿರುವುದು ನಿಜ. ಆದರೆ ಈ ತಂತ್ರಜ್ಞಾನಗಳು ಮಾತ್ರ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಬಲ್ಲವು ಎಂಬುದಂತೂ ನಿಜ. ತನಿಖೆಯಲ್ಲಿ ನ್ಯಾಯ ವಿಜ್ಞಾನದ ಬಳಕೆಯನ್ನು ನಾವು ಮತ್ತಷ್ಟು ತೀವ್ರಗೊಳಿಸಬೇಕಾಗಿದೆ.

ಈ ವೇಳೆ ಸಿಬಿಐನ ವಜ್ರ ಮಹೋತ್ಸವದ ವರ್ಷವನ್ನು ಗುರುತಿಸುವ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವುದರ ಜೊತೆಗೆ ಸಿಬಿಐನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಮೋದಿ ಬಿಡುಗಡೆ ಮಾಡಿದ್ದಾರೆ.

ಈ ಸಮಾರಂಭದಲ್ಲಿ ಮೋದಿ ಅವರು ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಏಜೆನ್ಸಿಯ ಅತ್ಯುತ್ತಮ ತನಿಖಾ ಅಧಿಕಾರಿಗಳಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!