ನವದೆಹಲಿ: ಗುಜರಾತ್‌ನ ಕಛ್‌ನಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನಿಕರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ್ದಾರೆ.
ಗುರುವಾರ ಕಛ್‌ಗೆ ಭೇಟಿ ನೀಡಿದ ಮೋದಿ ಸರ್ ಕ್ರೀಕ್ ಬಳಿಯ ಲಕ್ಕಿ ನಾಲಾದಲ್ಲಿ ಭಾರತೀಯ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಬಳಿಕ ಸೈನಿಕರಿಗೆ ಸಿಹಿತಿಂಡಿಗಳನ್ನು ಹಂಚಿದರು.
#WATCH | Prime Minister Narendra Modi celebrates Diwali with BSF, Army, Navy and Air Force personnel at Lakki Nala in the Sir Creek area in Kachchh, Gujarat. pic.twitter.com/WS7vS8xZak
— ANI (@ANI) October 31, 2024
ಲಕ್ಕಿ ನಾಲಾ ಸರ್ ಕ್ರೀಕ್ ಚಾನಲ್‌ನ ಒಂದು ಭಾಗವಾಗಿದೆ. ಇದು ಕ್ರೀಕ್ ಗಡಿಯ ಆರಂಭಿಕ ಹಂತವಾಗಿದ್ದು, ಅಲ್ಲಿ ಜವುಗು ಪ್ರದೇಶವಿದೆ. ಅಲ್ಲಿ ಗಸ್ತು ಕಾರ್ಯಾಚರಣೆಯನ್ನು ನಡೆಸುವುದು ತುಂಬಾ ಸವಾಲಿನ ಕೆಲಸವಾಗಿದೆ ಈ ಪ್ರದೇಶವು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಕಣ್ಗಾವಲಿನಲ್ಲಿದೆ. ಪಾಕಿಸ್ತಾನದ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರು ಆಗಾಗ್ಗೆ ಭಾರತದೊಳಗೆ ನುಸುಳಲು ಪ್ರಯತ್ನಿಸುವ ಪ್ರದೇಶವಾಗಿದೆ.
ಇಂಥ ದುರ್ಗಮ ಪ್ರದೇಶದಲ್ಲಿ ಸಂಕಷ್ಟಗಳ ನಡುವೆಯೂ ಭಾರತದ ಗಡಿ ಸುರಕ್ಷತೆಗಾಗಿ ಹೋರಾಡುವ ಯೋಧರ ಕಾರ್ಯತತ್ಪರತೆಯನ್ನು ಮೋದಿ ಶ್ಲಾಘಿಸಿದ್ರು.