ಚಾಮರಾಜನಗರ: ಆಸ್ಕರ್ ವಿಜೇತ ಸಾಕ್ಷ್ಯಚಿತ್ರ “ದ ಎಲಿಫೆಂಟ್ ವಿಸ್ಪರರ್ಸ್” ಪಾತ್ರಧಾರಿಗಳಾದ ಬೆಳ್ಳಿ ಮತ್ತು ಬೊಮ್ಮ ದಂಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಸುಯೋಗ ಲಭಿಸಿದೆ. ಭಾನುವಾರ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಬೆಳ್ಳಿ ಮತ್ತು ಬೊಮ್ಮ ಇಬ್ಬರನ್ನೂ ಭೇಟಿಯಾಗಿ ಸನ್ಮಾನಿಸಲಿದ್ದಾರೆ.
ದೇಶದ ವಿವಿಧ ಹುಲಿ ಯೋಜನೆಗಳ ನಿರ್ದೇಶಕರೊಡನೆ ಸಂವಾದ ನಡೆಸಲಿರುವ ಪ್ರಧಾನಿ ಮೋದಿ, ಇಂದು ದೆಹಲಿಗೆ ವಾಪಸಾಗಲಿದ್ದಾರೆ.
ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಟ್ರಿಪ್ ನಡೆಸುತ್ತಿರುವ ಪ್ರಧಾನಿ ಮೋದಿ, ತಮ್ಮ ಪ್ರವಾಸ ಅನುಭವಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಕಾಡೆಮ್ಮೆ, ಜಿಂಕೆಯ ಹಿಂಡುಗಳನ್ನು ಕೆಮೆರಾದಲ್ಲಿ ಸೆರೆಹಿಡಿದ ಪ್ರಧಾನಿ ಮೋದಿ, ಭಾರತದ ಅರಣ್ಯಗಳ ಜೀವ ವೈವಿಧ್ಯತೆ ಹಾಗೂ ಸೌಂದರ್ಯ ಅದ್ಭುತ ಎಂದು ಉದ್ಗರಿಸಿದ್ದಾರೆ.