ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 9ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವ್ ಹಿನ್ನೆಲೆ ಇಂದಿನಿಂದ ಏ. 9ರವರೆಗೆ ಬಂಡೀಪುರದಲ್ಲಿ ಸಫಾರಿ ಬಂದ್ ಆಗಲಿದೆ.
ಈಗಾಗಲೇ ಪ್ರಧಾನಿ ಮೋದಿ ಭದ್ರತೆ ಹೊಣೆ ಹೊತ್ತಿರುವ ಎಸ್ ಪಿ ಜಿ ತಂಡ ಗುಂಡ್ಲುಪೇಟೆಗೆ ಬಂದಿದೆ. ಅಲ್ಲದೇ, ಇಂದಿನಿಂದ 9ರವರೆಗೆ ಬಂಡೀಪುರ ವ್ಯಾಪ್ತಿಯ ಎಲ್ಲ ಹೋಂ ಸ್ಟೇಗಳು, ರೆಸಾರ್ಟ್ ಗಳು ಮತ್ತು ಲಾಡ್ಜ್ ಗಳು ಬಂದ್ ಆಗಲಿವೆ. ಪ್ರಧಾನಿ ಮೋದಿ ಭದ್ರತೆ, ರಸ್ತೆ ನಿರ್ವಹಣೆ ಹಾಗೂ ಭೇಟಿಯ ಪೂರ್ವ ಸಿದ್ಧತೆ ಕೈಗೊಳ್ಳಬೇಕಾಗಿರುವುದರಿಂದ ಸಫಾರಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ, ಹೋಂ ಸ್ಟೇ, ರೆಸಾರ್ಟ್ ಗಳು ಹಾಗೂ ಲಾಡ್ಜ್ ಗಳ ಕಾಯ್ದಿರಿಸುವಿಕೆ, ತಂಗುವಿಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶ ಹೊರಡಿಸಿದ್ದಾರೆ.