Monday, February 9, 2026
Homeಟಾಪ್ ನ್ಯೂಸ್PM MODI : ನಿಲ್ಲದ ಪಾಕ್‌ ದಾಳಿ : ಸೇನಾ ಮುಖ್ಯಸ್ಥರ ಜೊತೆ ಮೋದಿ ಮಹತ್ವದ...

PM MODI : ನಿಲ್ಲದ ಪಾಕ್‌ ದಾಳಿ : ಸೇನಾ ಮುಖ್ಯಸ್ಥರ ಜೊತೆ ಮೋದಿ ಮಹತ್ವದ ಸಭೆ – VIDEO

ನವದೆಹಲಿ : ಭಾರತ-ಪಾಕಿಸ್ತಾನದ ಮಧ್ಯೆ ಉದ್ಭವಿಸಿರುವ ಸಂಘರ್ಷದ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಮೂರೂ ಸೇನಾ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದರು.

ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಅದಕ್ಕೆ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7ರಂದು ಪಾಕ್‌ನ ಉಗ್ರ ನೆಲೆಯ ಮೇಲೆ ದಾಳಿ ನಡೆಸಿತು. ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಭಾರತ ಸ್ಪಷ್ಟನೆಯನ್ನೂ ನೀಡಿತ್ತು. ಆದಾದ ಬಳಿಕ ಪಾಕ್‌ ಕದನ ವಿರಾಮ ಉಲ್ಲಂಘಿಸಿ ಭಾರತದ ಹಲವು ನಗರಗಳ ಮೇಲೆ ಪ್ರತಿದಾಳಿ ನಡೆಸಿದೆ. ಪಾಕ್ ದಾಳಿಯನ್ನು ಭಾರತೀಯ ಸೇನೆ ದಿಟ್ಟವಾಗಿ ಮಟ್ಟ ಹಾಕಿದೆ.

ಇದೆಲ್ಲದರ ನಡುವೆ ನರೇಂದ್ರ ಮೋದಿ ಅದಿಕೃತ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ನೆಲ, ಜಲ, ವಾಯು ಸೇನೆಯ ಮುಖ್ಯಸ್ಥರು ಭಾಗವಹಿಸಿದರು. ಜತೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತಿತರರು ಉಪಸ್ಥಿತರಿದ್ದರು.

ಭೂ ಸೇನೆ ,ವಾಯು ಪಡೆ ಹಾಗೂ ನೌಕಾ ಸೇನೆಯ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಮಹತ್ವದ ಚರ್ಚೆ ನಡೆಸಿದ್ದು, ಪಾಕ್‌ಗೆ ಪ್ರತ್ಯುತ್ತರ ನೀಡುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!