Sunday, November 10, 2024
Homeದೇಶತೆಲಂಗಾಣ: ಸಿಕಂದರಾಬಾದ್- ತಿರುಪತಿ ವಂದೇ ಭಾರತ್ ಎಕ್ರ್ ಪ್ರೆಸ್ ಗೆ ಮೋದಿ ಚಾಲನೆ

ತೆಲಂಗಾಣ: ಸಿಕಂದರಾಬಾದ್- ತಿರುಪತಿ ವಂದೇ ಭಾರತ್ ಎಕ್ರ್ ಪ್ರೆಸ್ ಗೆ ಮೋದಿ ಚಾಲನೆ

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎರಡನೇ ಬ್ಯಾಚ್‌ಗೆ ಪ್ರಧಾನಿ ನರೇಂದ್ರ ಮೋದಿ ತೆಲಂಗಾಣದಲ್ಲಿ ಚಾಲನೆ ನೀಡಿದರು.

ಬೀಬಿನಗರದಲ್ಲಿ ಏಮ್ಸ್ ಸೇರಿದಂತೆ ಸುಮಾರು 11,300 ಕೋಟಿ ರೂ.ಗಳ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗಾಗಿ ಪ್ರಧಾನಿ ದಕ್ಷಿಣ ಭಾರತದ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ.

ಶನಿವಾರ ತೆಲಂಗಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಸೇರಿದಂತೆ ಗಣ್ಯರು ಬರಮಾಡಿಕೊಂಡರು.

ಹೈದರಾಬಾದ್‌ನ ಐಟಿ ಸಿಟಿ ಜೊತೆಗೆ ತಿರುಪತಿಯ ವೆಂಕಟೇಶ್ವರ ದೇವಸ್ಥಾನದೊಂದಿಗೆ ಸಂಪರ್ಕಿಸುವ ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರಾಜ್ಯದ ಎರಡನೇ ವಂದೇ ಭಾರತ್ ರೈಲು. ಈ ರೈಲು 2 ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!