Saturday, March 15, 2025
Homeಟಾಪ್ ನ್ಯೂಸ್VIRAL NEWS: ವರ್ಕ್‌ ಫ್ರಂ ಕುಂಭಮೇಳ - ಉದ್ಯೋಗಿಯ ಫೋಟೋ ಭಾರೀ ವೈರಲ್ !

VIRAL NEWS: ವರ್ಕ್‌ ಫ್ರಂ ಕುಂಭಮೇಳ – ಉದ್ಯೋಗಿಯ ಫೋಟೋ ಭಾರೀ ವೈರಲ್ !

ಪ್ರಯಾಗರಾಜ್: ಕಿಕ್ಕಿರಿದು ತುಂಬಿರುವ ಜನಸಮೂಹದ ಮಧ್ಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಲ್ಯಾಪ್ ಟಾಪ್ ಹಿಡಿದು ಕುಳಿತು ಕೆಲಸ ಮಾಡುತ್ತಿರುವ ಫೋಟೋ ಒಂದು ಭಾರೀ ವೈರಲ್ ಆಗಿದೆ. ಈ ಫೋಟೋ ಪ್ರಯಾಗರಾಜ್ ನ ಮಹಾ ಕುಂಭಮೇಳದಲ್ಲಿ ಕ್ಲಿಕ್ಕಿಸಲಾದ ಫೋಟೋ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುಣ್ಯಸ್ನಾನದ ನಂತರ ಬಟ್ಟೆ ಬದಲಿಸಿಕೊಂಡು ತಿರುಗಾಡುತ್ತಿದ್ದ ಜನಸಮೂಹದ ನಡುವೆ, ಈ ವ್ಯಕ್ತಿ ಸದ್ದಿಲ್ಲದೆ ನೆಲದ ಮೇಲೆ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಸುತ್ತಮುತ್ತಲಿನ ಜನ ಇದನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

ವರ್ಕ್ ಫ್ರಮ್ ಹೋಂ ನಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಯೊಬ್ಬರು ಕೆಲಸದ ವೇಳೆಯಲ್ಲೇ ಹೀಗೆ ಪುಣ್ಯಸ್ನಾನದಲ್ಲಿ ಭಾಗಿಯಾಗಲು ಬಂದಿದ್ದಾರೆ. ಈ ವೇಳೆ ಪ್ರಯಾಗ್‌ರಾಜ್‌ನಿಂದ ಕಾನ್ಫರೆನ್ಸ್ ಕರೆಗೆ ಹಾಜರಾಗಲು ಈ ಉದ್ಯೋಗಿ ಅಲ್ಲೆ ತಮ್ಮ ಲ್ಯಾಪ್ ಟಾಪ್ ಮೂಲಕ ಕೆಲಸಕ್ಕೆ ಹಾಜರಾಗಲು ಯತ್ನಿಸುತ್ತಿರುವುದನ್ನು ಇಲ್ಲಿ ಕಾಣಬಹುದು.

ಈ ಬಗ್ಗೆ ನೆಟ್ಟಿಗರು ಹಲವು ಬಗೆಯ ಕಮೆಂಟ್ಸ್ ಮಾಡಿದ್ದು ಪೋಸ್ಟ್ ಫುಲ್ ವೈರಲ್ ಆಗಿದೆ. ಈ ಪೈಕಿ ನೀವು ಏಕಕಾಲದಲ್ಲಿ ಮೋಕ್ಷ ಮತ್ತು ಸಂಬಳ ಎರಡನ್ನೂ ಬಯಸಿದಾಗ ಈ ರೀತಿ ಪರಿಸ್ಥಿತಿ ಎದಿರಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!