Wednesday, May 14, 2025
Homeಟಾಪ್ ನ್ಯೂಸ್E-KHATA: ಇ-ಖಾತಾ ಮಾಡಿಸಿಕೊಳ್ಳಲು ಜನರ ಪರದಾಟ: ಆಮೆ ವೇಗದಲ್ಲಿ ನೋಂದಣಿ ಪ್ರಕ್ರಿಯೆ

E-KHATA: ಇ-ಖಾತಾ ಮಾಡಿಸಿಕೊಳ್ಳಲು ಜನರ ಪರದಾಟ: ಆಮೆ ವೇಗದಲ್ಲಿ ನೋಂದಣಿ ಪ್ರಕ್ರಿಯೆ

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಖಾತಾ ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇ-ಆಸ್ತಿ ಮಾಡಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಅರೆಬರೆಯಾಗಿ ಯೋಜನೆ ಅನುಷ್ಠಾನಗೊಂಡಿರುವ ಕಾರಣ ಹೊಸ ತಂತ್ರಾಂಶದಲ್ಲಿ ದೋಷಗಳು ಕಾಣಿಸಿಕೊಂಡಿದೆ. ಇದರಿಂದಾಗಿ ಆಸ್ತಿ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳ ಮಾಲೀಕರಿಗೆ ಡಿಜಿಟಲ್‌ ಖಾತಾ ವರ್ಗಾವಣೆಯಾಗದೆ ಹೊಸ ನೋಂದಣಿ ಆಗುತ್ತಿಲ್ಲ. ಪಾಲಿಕೆಯ ವಿವಿಧ ಕಂದಾಯ ಕಚೇರಿಗಳಲ್ಲಿ ಹಳೆಯ ದಾಖಲೆಗಳನ್ನು ಪರಿಶೀಲಿಸಿ ಇ-ಖಾತಾ ಜನರೇಟ್‌ ಮಾಡಿಸಿ ಇ-ಆಸ್ತಿ ವ್ಯವಸ್ಥೆಗೆ ಅಳವಡಿಸುವ ಕಾರ್ಯ ಅಪೂರ್ಣವಾಗುತ್ತಿದೆ.

ಇ-ಖಾತಾ ಮಾಡಿಸುವ ಸಂದರ್ಭ ಎದುರಾಗಿವ ಸಮಸ್ಯೆಗಳನ್ನು ನಿವಾರಿಸಲು ಬಿಬಿಎಂಪಿಯ ಎಲ್ಲಾ ಎಆರ್‌ಒ ಕಚೇರಿಗಳಲ್ಲಿ ಹೆಲ್ಪ್‌ ಡೆಸ್ಕ್‌ ಆರಂಭಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಈ ವರೆಗೂ ಹೆಲ್ಪ್‌ ಡೆಸ್ಕ್‌ಗಳು ಪ್ರಾರಂಭವಾಗಿಲ್ಲ.

ಇ-ಖಾತಾ ಪ್ರಕ್ರಿಯೆಯಲ್ಲಿ ಕಂಡುಬರುತ್ತಿರುವ ಕೆಲವು ದೋಷಗಳನ್ನು ನಿವಾರಿಸಲು ಪ್ರಯತ್ನಗಳು ನಡೆಯುತ್ತಿವೆ. ಇ-ಖಾತಾ ಜನರೇಟ್‌ ಮಾಡುವ ವಿಧಾನವನ್ನು ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಇ-ಖಾತಾ ಪ್ರಕ್ರೊಯೆ ಚಾಲ್ತಿಗೆ ಬರುತ್ತದೆ. ಆದರೆ ಇದಕ್ಕಾಗಿ ಇನ್ನೂ ಒಂದು ತಿಂಗಳು ಕಾಯಬೇಕು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!