Sunday, June 7, 2026
Homeಟಾಪ್ ನ್ಯೂಸ್Job Alert: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸೆಯೇ; ಹಾಗಾದ್ರೆ ಇಲ್ಲಿದೆ ಉದ್ಯೋಗಾವಕಾಶ

Job Alert: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸೆಯೇ; ಹಾಗಾದ್ರೆ ಇಲ್ಲಿದೆ ಉದ್ಯೋಗಾವಕಾಶ

ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಒಟ್ಟು 500 ಜವಾನ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 23, 2025 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅರ್ಜಿ ಹಾಕಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ: ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಓದಲು, ಬರೆಯಲು ಹಾಗೂ ಮಾತನಾಡಲು ಬರಬೇಕು.

ವಯೋಮಿತಿ: ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 26 ವರ್ಷ ಮೀರಿರಬಾರದು.

ವೇತನ: ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 19,500 ರೂ. ನಿಂದ 37,815 ರೂ.ವರೆಗೆ ಸಂಬಳ ಕೊಡಲಾಗುತ್ತದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ: ಸಾಮಾನ್ಯ, ಇಡಬ್ಲ್ಯೂಎಸ್​ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600 ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಪಾವತಿಸಬೇಕು.

ಈ ಹುದ್ದೆಗೆ ಮೇ 3ರಿಂದ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಮೇ 23 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಬ್ಯಾಂಕ್​ ಆಫ್​ ಬರೋಡಾದ ಅಧಿಕೃತ ವೆಬ್ಸೈಟ್ bankofbaroda.in ಇಲ್ಲಿಗೆ ಭೇಟಿ ನೀಡಬಹುದು.

ಹೆಚ್ಚಿನ ಸುದ್ದಿ

Change Language »
error: Content is protected !!