Monday, November 4, 2024
Homeರಾಜಕೀಯಮೀಸಲಾತಿ ನೀತಿಗೆ ವಿರೋಧ – ಯಡಿಯೂರಪ್ಪ ಮನೆಗೆ ಕಲ್ಲು

ಮೀಸಲಾತಿ ನೀತಿಗೆ ವಿರೋಧ – ಯಡಿಯೂರಪ್ಪ ಮನೆಗೆ ಕಲ್ಲು

ಒಳ ಮೀಸಲಾತಿ ಬಗ್ಗೆ ಬಿಜೆಪಿ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಳುಹಿಸಿರುವ ಶಿಫಾರಸು ವರದಿಯನ್ನು ವಿರೋಧಿಸಿ ಸೋಮವಾರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯ ಮೇಲೆ ಕಲ್ಲು ತೂರಾಟ ನಡೆದಿದೆ. ತಾಲೂಕು ಬಂಜಾರ ಸಮಾಜ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆ ತಾರರಕ್ಕೇರಿದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.
ಬಿಎಸ್‍ವೈ ನಿವಾಸದ ಎದುರು ಪ್ರತಿಭಟನಾಕಾರರು ಟೈರಿಗೆ ಬೆಂಕಿಯಿಟ್ಟು, ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗುತ್ತಿದ್ದರು. ್ದ ಪ್ರತಿಭಟನೆ ಏಕಾಏಕಾ ತೀವ್ರ ವಿಕೋಪಕ್ಕೆ ತೆರಳಿದ್ದು, ಮನೆಯ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಸಿಬ್ಬಂದಿಯ ಎದುರೇ ಈ ಕೃತ್ಯ ನಡೆದಿದೆ. ಬಿಎಸ್‍ವೈ ನಿವಾಸದ ಮುಂದಿದ್ದ ಬ್ಯಾರಿಕೇಡ್‍ನ್ನು ತಳ್ಳಿ ಒಳನುಗ್ಗಿದ ಪ್ರತಿಭಟನಾಕಾರರ ಗುಂಪು ಮನೆಯತ್ತ ಕಲ್ಲು ಮತ್ತು ಚಪ್ಪಲಿಯನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದೆ. ಶಿಕಾರಿಪುರದ ಕಾನಕೇರಿ ಬಡಾವಣೆಯಲ್ಲಿರುವ ಮೈತ್ರಿ ನಿವಾಸದ ಕಿಟಕಿ ಗಾಜುಗಳು ಕಲ್ಲಿನೇಟಿಗೆ ಛಿದ್ರಗೊಂಡಿವೆ.
ತಾಲೂಕು ಬಂಜಾರ ಸಮಾಜದ ಮುಖಂಡರಾದ ರಾಘವೇಂದ್ರ ನಾಯಕ್ , ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆಗಿದ್ದು ಕಲ್ಲೆಸೆತ ಪ್ರಕರಣದಲ್ಲಿ ಸ್ಥಳೀಯ ನಾಯಕರ ಕೈವಾಡ ಇರಬಹುದೆಂದು ಶಂಕಿಸಲಾಗಿದೆ.

ಯಡಿಯೂರಪ್ಪ ನಿವಾಸದ ಎದುರು ಘರ್ಷಣೆ ಶುರುವಾದ ಸಂದರ್ಭ

ಟೈರಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು

ಹೆಚ್ಚಿನ ಸುದ್ದಿ

error: Content is protected !!