ಚುನಾವಣೆಗೆ ಇನ್ನು ವಾರಗಳು ಬಾಕಿ ಇರುವಾಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರೌಡಿ ಶೀಟರ್ ಒಬ್ಬಾತನೊಂದಿಗೆ ಗುಪ್ತ ಸಭೆ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ತನ್ನ ಆಂಬ್ಯುಲೆನ್ಸ್ ನಲ್ಲಿ ಎಸ್ಕೆಪ್ ಮಾಡಿಸಿದ ಆರೋಪದಡಿ 2 ದಿನಗಳ ಹಿಂದೆಯಷ್ಟೇ ದಾವಣಗೆರೆ ಪೊಲೀಸರಿಂದ ಬಂಧನವಾಗಿರುವ ಶಿರಸಿ ರೌಡಿ ಶೀಟರ್ ರೌಡಿ ಶೀಟರ್ ಫಯಾಜ್ ಚೌಟಿ ಅಲಿಯಾಸ್ ಪಯ್ಯು ಬಂಧನಕ್ಕೊಳಗಾಗುವ ಮುನ್ನ ಕಾಗೇರಿ ಜೊತೆಗೆ ಸಭೆ ನಡೆಸಿದ್ದಾನೆ ಎನ್ನಲಾಗಿದೆ.
ಬಿಡುಗಡೆಯಾಗಿರುವ ಫೋಟೋದಲ್ಲಿ ಆಪ್ತನಂತೆ ಕಾಗೇರಿ ಪಕ್ಕದಲ್ಲಿಯೇ ಚೌಟಿ ಕುಳಿತಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.
ಫಯಾಜ್ ಚೌಟಿ ವಿರುದ್ಧ ದರೋಡೆ, ಬ್ಲಾಕ್ ಮೇಲ್, ಹಣ ವಂಚನೆ, ಅಪಹರಣ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅಲ್ಲದೆ, ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕ ಭೂಗತ ಲೋಕದ ವ್ಯಕ್ತಿಗಳ ಜೊತೆ ಫಯಾಝ್‌ಗ ಸಂಪರ್ಕವಿದೆ. ಇಂತಹ ರೌಡಿಶೀಟರ್ ತನ್ನ 50 ಕ್ಕೂ ಅಧಿಕ ಬೆಂಬಲಿಗರೊಂದಿಗೆ ಕಾಗೇರಿ ಕಛೇರಿಗೆ ಭೇಟಿ ಕೊಟ್ಟು ಗುಪ್ತ ಸಭೆ ನಡೆಸಿದ್ದಾನೆ.