Monday, February 9, 2026
Homeಕ್ರೀಡೆPBKS Vs DC: ಪಾಕ್‌ ದಾಳಿ ಬೆನ್ನಲ್ಲೇ ಪಂಜಾಬ್ ಕಿಂಗ್ಸ್- ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ರದ್ದು..!

PBKS Vs DC: ಪಾಕ್‌ ದಾಳಿ ಬೆನ್ನಲ್ಲೇ ಪಂಜಾಬ್ ಕಿಂಗ್ಸ್- ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ರದ್ದು..!

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಇಂದಿನ ಐಪಿಎಲ್‌ ಪಂದ್ಯವನ್ನು ರದ್ದು ಮಾಡಲಾಗಿದೆ.

ಧರ್ಮಶಾಲಾದಲ್ಲಿಇಂದು ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್ ಪಂದ್ಯ ನಡೆಯುತ್ತಿತ್ತು. ಆದರೆ ಪಂದ್ಯ ನಡೆಯುತ್ತಿದ್ದಾಗಲೇ ಅರ್ಧದಲ್ಲೇ ರದ್ದು ಮಾಡಿ ಗ್ರೌಂಡ್‌‌ನಲ್ಲಿದ್ದ ಆಟಗಾರರು ಹಾಗೂ ಪ್ರೇಕ್ಷಕರು ಈ ಕೂಡಲೇ ಕ್ರೀಡಾಂಗಣ ತೊರೆಯಲು ಸೇನೆ ಸೂಚನೆ ನೀಡಿದೆ.

ಪಂಜಾಬ್ 10.1 ಓವರ್‌ಗಳಲ್ಲಿ 122 ರನ್‌ಗಳಿಗೆ ಆಟವಾಡುತ್ತಿದ್ದಾಗ ಕ್ರೀಡಾಂಗಣದಲ್ಲಿನ ಒಂದು  ಲೈಟ್‌  ಆರಿಹೋಯಿತು. ಲೈಟ್ ಟವರ್‌ನಲ್ಲಿ ಏನೋ ಸಮಸ್ಯೆ ಇರುವಂತೆ ತೋರುತ್ತಿತ್ತು ಆದರೆ ಇದಾದ ನಂತರ ಇತರ ಲೈಟ್‌ಗಳನ್ನು ಸಹ ಆಫ್ ಮಾಡಿ ಆಟಗಾರರನ್ನು ತಕ್ಷಣವೇ ಮೈದಾನದಿಂದ ಹೊರಗೆ ಕಳುಹಿಸಲಾಯಿತು. ಪಂದ್ಯ ರದ್ದಾದ ವಿಷಯವನ್ನು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ.

ಪಾಕಿಸ್ತಾನ ಭಾರತದ ಹಲವು ನಗರಗಳ ಮೇಲೆ ಡ್ರೋನ್ ದಾಳಿಗಳನ್ನು ನಡೆಸಿದೆ. ಉಧಂಪುರ, ಜಮ್ಮು, ಅಖ್ನೂರ್, ಪಠಾಣ್‌ಕೋಟ್ ಮತ್ತು ಕಥುವಾಗಳಲ್ಲಿ ಪಾಕಿಸ್ತಾನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು. ರಾಜಸ್ಥಾನ ಮತ್ತು ಪಂಜಾಬ್‌ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಲಾಯಿತು. ಆದರೆ ಭಾರತ ಅವುಗಳನ್ನು ಹೊಡೆದುರುಳಿಸಿತು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!