Saturday, January 25, 2025
Homeಟಾಪ್ ನ್ಯೂಸ್ಏರುತ್ತಿರುವ ಚುನಾವಣೆ ಕಾವು: ಬೀದಿಗಿಳಿಯುತ್ತಿರುವ ಬೆಂಬಲಿಗರು

ಏರುತ್ತಿರುವ ಚುನಾವಣೆ ಕಾವು: ಬೀದಿಗಿಳಿಯುತ್ತಿರುವ ಬೆಂಬಲಿಗರು

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಬೆಂಬಲಿಗರ ಜಗಳಗಳು ತಾರಕಕ್ಕೇರಿವೆ. ಯಾದಗಿರಿಯ ಗುರುಮಠಕಲ್‌ ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ನಿನ್ನೆ (ಏಪ್ರಿಲ್ 03) ನಡೆದ ಮೌಲಾಲಿ ದರ್ಗಾ ಜಾತ್ರೆಯಲ್ಲಿ ಕೂಡಾ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ಬಡುವೆ ಹೊಡೆದಾಟ ನಡೆದಿದೆ.

ದರ್ಗಾ ಜಾತ್ರೆಗೆ ಕಾಂಗ್ರೆಸ್ ನ ನಾಯಕ ಬಾಬುರಾವ್ ಚಿಂಚನಸೂರ್ ಗೆ ಗ್ರಾಮಸ್ಥರು ಆಹ್ವಾನ ನೀಡಿದ್ದು, ಅದರಂತೆ, ಚಿಂಚನಸೂರ್ ಜಾತ್ರೆಗೆ ಬಂದಿದ್ದಾರೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿ ಪಡಿಸಿದ್ದು, ಅಭಿವೃದ್ಧಿ ಕಾರ್ಯ ಮಾಡದೆ ಚುನಾವಣೆ ಇರುವಾಗ ರಾಜಕೀಯ ಮುಖಂಡರಾಗಿ ಜಾತ್ರೆಗೆ ಯಾಕೆ ಬಂದ್ರಿ ಎಂದು ತಗಾದೆ ತೆಗೆದಿದ್ದರು. ಇದೇ ಕಾರಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಚಿಂಚನಸೂರ ಸ್ಥಳದಿಂದ ತೆರಳಿದ್ದಾರೆ. ಆದರೆ, ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಕೋಲಾರದಲ್ಲೂ ಜೆಡಿಎಸ್‌ ಕಾಂಗ್ರೆಸ್‌ ಸಂಘರ್ಷ

ಇನ್ನು ಕೋಲಾರದ ಮುಳಬಾಗಿಲಿನಲ್ಲೂ ಇಂತಹದ್ದೇ ಪ್ರಕರಣ ವರದಿಯಾಗಿದೆ. ಮುಳಗಿಲಿನಲ್ಲಿ ತಡರಾತ್ರಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಸೋಮವಾರ ರಾತ್ರಿ ಕಾಂಗ್ರೆಸ್ ಮುಖಂಡ ಅಮಾನುಲ್ಲಾ ಮೇಲೆ ಜೆಡಿಎಸ್ ಮುಖಂಡ ಜಹೀರ್ ಖಾನ್ ಎಂಬುವರು ಹಲ್ಲೆಗೆ ಯತ್ನಿಸಿದ್ದು, ಅದಕ್ಕೆ ಪ್ರತೀಕಾರವಾಗಿ ಇಂದು ಬೆಳ್ಳಂಬೆಳಗ್ಗೆ ಜೆಡಿಎಸ್ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಮುಖಂಡನ ಮಗ ರಾಡ್ ನಿಂದ ಹಲ್ಲೆ ಮಾಡಿದ್ದಾನೆ.

ಘಟನೆಯಲ್ಲಿ ಮುಬಾರಕ್ ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!