Sunday, May 17, 2026
Homeಟಾಪ್ ನ್ಯೂಸ್BREAKING NEWS : ಪಾಕ್ ಅಧಿಕಾರಿಗೆ ‘ಪರ್ಸನಾ ನಾನ್ ಗ್ರಾಟಾ’ - 24 ಗಂಟೆಯಲ್ಲಿ ಭಾರತ...

BREAKING NEWS : ಪಾಕ್ ಅಧಿಕಾರಿಗೆ ‘ಪರ್ಸನಾ ನಾನ್ ಗ್ರಾಟಾ’ – 24 ಗಂಟೆಯಲ್ಲಿ ಭಾರತ ತೊರೆಯಲು ಕಟ್ಟಪ್ಪಣೆ!

ನವದೆಹಲಿ: ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿಗೆ ಕೇಂದ್ರ ಸರ್ಕಾರ ‘ಪರ್ಸನಾ ನಾನ್ ಗ್ರಾಟಾ’ ಘೋಷಣೆ ಮಾಡಿದೆ. ಇದರ ಜೊತೆಗೆ ಮುಂದಿನ ಗಂಟೆಗಳ ಒಳಗಾಗಿ ಭಾರತ ತೊರೆಯುವಂತೆ ಸೂಚನೆ ನೀಡಲಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಕಿಸ್ತಾನದ ಅಧಿಕಾರಿ ಭಾರತದಲ್ಲಿನ ಬೇಡದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಅವರನ್ನು ಗ್ರಾನಾ ನಾನ್ ಗ್ರಾಟಾ ಎಂದು ಘೋಷಣೆ ಮಾಡಿದೆ.

ಹೀಗಾಗಿ ಈ ಅಧಿಕಾರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಮುಂದಿನ 24 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕು ಎಂದು ನೇರವಾಗಿ ಸೂಚಿಸಲಾಗಿದೆ.ಈ ಬಗ್ಗೆ ಪಾಕಿಸ್ತಾನ ಹೈಕಮಿಷನ್‌ನ ಚಾರ್ಜ್ ಡಿ ಅಫೇರ್ಸ್‌ಗೆ ವಿದೇಶಾಂಗ ಸಚಿವಾಲ ಆದೇಶ ಹೊರಡಿಸಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!