ಇಸ್ಲಾಮಾಬಾದ್: ಫೇಸ್‌ಬುಕ್‌ನಲ್ಲಿ ಧರ್ಮನಿಂದನೆ ಪೋಸ್ಟ್ ಅನ್ನು ಹಂಚಿಕೊಂಡ ನಾಲ್ವರು ಯುವಕರಿಗೆ ಪಾಕಿಸ್ತಾನದ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ.
ಲಾಹೋರ್ ಮೂಲದ ವಜೀದ್ ಅಲಿ, ಅಸ್ಪಖ್ ಅಲಿ, ರಾಣಾ ಉಸ್ಮಾನ್ ಹಾಗೂ ಸುಲೇಮಾನ್ ಶಾಜಿದ್‌ಗೆ ಲಾಹೋರ್‌ನ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ತಾರೀಖ್ ಆಯುಬ್ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ನಾಲ್ವರು ಯುವಕರು ಫೇಸ್‌ಬುಕ್‌ನ ಬೇರೆ ಬೇರೆ ಖಾತೆಗಳಿಂದ ಪ್ರವಾದಿ ಮೊಹಮ್ಮದ್‌ರನ್ನು ಅವಮಾನಿಸುವ ಪೋಸ್ಟ್‌ಗಳನ್ನು ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಕೋರ್ಟ್ ಯುವಕರಿಗೆ ಮರಣದಂಡನೆಯೊಂದಿಗೆ 45 ಲಕ್ಷ ಪಾಕ್ ರೂಪಾಯಿಗಳನ್ನು ದಂಡವಾಗಿಯೂ ವಿಧಿಸಿದೆ.
ಧರ್ಮನಿಂದನೆಗೆ ಪಾಕಿಸ್ತಾನದ ನ್ಯಾಯಾಲಯ ಮರಣ ದಂಡನೆಯಂತಹ ಕಠೋರ ಕ್ರಮವನ್ನು ತೆಗೆದುಕೊಂಡಿರುವುದಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಎನ್‌ಜಿಒ ವಿರೋಧ ವ್ಯಕ್ತಪಡಿಸಿದೆ.