Sunday, January 25, 2026
Homeಟಾಪ್ ನ್ಯೂಸ್PAKISTAN: ಅಮೆರಿಕದಲ್ಲಿ ಪಾಕ್ ಪರ ಲಾಬಿ - ಲಕ್ಷ ಲಕ್ಷ ಹಣ ಸುರಿದಿದ್ದ ಪಾಕಿಸ್ತಾನ!

PAKISTAN: ಅಮೆರಿಕದಲ್ಲಿ ಪಾಕ್ ಪರ ಲಾಬಿ – ಲಕ್ಷ ಲಕ್ಷ ಹಣ ಸುರಿದಿದ್ದ ಪಾಕಿಸ್ತಾನ!

ವಾಷಿಂಗ್ಟನ್: ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಮತ್ತು ನಂತರ ಅಮೆರಿಕದ (America) ಉನ್ನತ ರಾಜಕಾರಣಿಗಳನ್ನು ಓಲೈಸಲು ವಾಷಿಂಗ್ಟನ್ ಡಿಸಿಯಲ್ಲಿರುವ ಪಾಕಿಸ್ತಾನದ (Pakistan) ಲಾಬಿ ಸಂಸ್ಥೆಗಳು ದೊಡ್ಡ ಪ್ರಯತ್ನವನ್ನು ನಡೆಸಿದ್ದವು. ಇದಕ್ಕಾಗಿ ಪಾಕಿಸ್ತಾನ ತಿಂಗಳಿಗೆ 50,000 ಡಾಲರ್‌ ವ್ಯಯಿಸಿತ್ತು ಎನ್ನಲಾಗಿದೆ.

ಯುಎಸ್ ನ್ಯಾಯ ಇಲಾಖೆಗೆ (DOJ) ಸಲ್ಲಿಸಿದ ವರದಿಯಲ್ಲಿ ಈ ವಿಚಾರಗಳು ಬಹಿರಂಗಗೊಂಡಿದೆ. ಸ್ಕ್ವೈರ್ ಪ್ಯಾಟನ್ ಬಾಗ್ಸ್ (SPG) ನಂತಹ ಸ್ಥಾಪಿತ ಸಂಸ್ಥೆಗಳು ಮತ್ತು ಜಾವೆಲಿನ್ ಅಡ್ವೈಸರ್ಸ್‌ನಂತಹ ಹೊಸ ಸಂಸ್ಥೆಗಳು, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಯುಎಸ್ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಾಯಕರನ್ನು ಹಾಗೂ ಎರಡೂ ಸದನಗಳಲ್ಲಿ ವಿದೇಶಾಂಗ ನೀತಿ ವಿಷಯಗಳನ್ನು ನಿರ್ವಹಿಸುವ ಶಾಸಕರನ್ನು ಪಾಕಿಸ್ತಾನ ಪರ ಓಲೈಸಲು ಪ್ರಯತ್ನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡೊನಾಲ್ಡ್ ಟ್ರಂಪ್ ಅವರ ಮಾಜಿ ಅಂಗರಕ್ಷಕ ಕೀತ್ ಶಿಲ್ಲರ್ ಮತ್ತು ಮಾಜಿ ಟ್ರಂಪ್ ಆರ್ಗನೈಸೇಶನ್ ಕಾರ್ಯನಿರ್ವಾಹಕ ಜಾರ್ಜ್ ಸೋರಿಯಲ್ ಸ್ಥಾಪಿಸಿದ ಜಾವೆಲಿನ್ ಅಡ್ವೈಸರ್ಸ್ ಅನ್ನು ಪಾಕಿಸ್ತಾನ ಏಪ್ರಿಲ್‌ನಲ್ಲಿ ಮಾಸಿಕವಾಗಿ 50,000 ಡಾಲರ್ ಶುಲ್ಕಕ್ಕೆ ನೇಮಿಸಿಕೊಂಡಿತು. ಡಿಒಜೆ ಗೆ ಕಂಪನಿಯು ಸಲ್ಲಿಸಿದ ದಾಖಲೆಗಳ ಪ್ರಕಾರ, ಜಾವೆಲಿನ್ ಅಡ್ವೈಸರ್ಸ್ ಆಪರೇಷನ್ ಸಿಂಧೂರ್ ಸಮಯದಲ್ಲಿ ಇಸ್ಲಾಮಾಬಾದ್ ಪರ ಲಾಬಿ ಮಾಡಲು ಸೆನೆಟ್ ಮೆಜಾರಿಟಿ ನಾಯಕ ಜಾನ್ ಥೂನ್, ಸೆನೆಟ್ ಮೈನಾರಿಟಿ ನಾಯಕ ಚಕ್ ಶುಮರ್, ಹೌಸ್ ಮೆಜಾರಿಟಿ ನಾಯಕ ಸ್ಟೀವ್ ಸ್ಕಾಲೈಸ್ ಮತ್ತು ಹೌಸ್ ಮೈನಾರಿಟಿ ನಾಯಕ ಹಕೀಮ್ ಜೆಫ್ರಿಸ್‌ನಂತಹ ಪ್ರಭಾವಿ ಯುಎಸ್ ರಾಜಕಾರಣಿಗಳ ಕಚೇರಿಗಳಲ್ಲಿ ಮಾತುಕತೆ ನಡೆಸಿತ್ತು.

ವಿದೇಶಾಂಗ ವ್ಯವಹಾರಗಳು ಮತ್ತು ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ಎರಡೂ ಸದನಗಳಲ್ಲಿ ಪ್ರಮುಖ ಸಮಿತಿಗಳನ್ನು ಮುನ್ನಡೆಸುವ ಶಾಸಕರನ್ನು ಸಹ ಈ ಸಂಸ್ಥೆ ಗುರಿಯಾಗಿಸಿಕೊಂಡಿದೆ. ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಉದ್ವಿಗ್ನತೆಯನ್ನು ಚರ್ಚಿಸಲು ಮೇ 7 ರಂದು ಪಾಕಿಸ್ತಾನಿ ರಾಯಭಾರಿ ರಿಜ್ವಾನ್ ಸಯೀದ್ ಶೇಖ್ ಮತ್ತು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಬ್ರಿಯಾನ್ ಮಾಸ್ಟ್ ನಡುವೆ ಜಾವೆಲಿನ್ ಕರೆ ಏರ್ಪಡಿಸಿತ್ತು. ವಿದೇಶಿ ಸಂಬಂಧಗಳು, ಗುಪ್ತಚರ ಮತ್ತು ಸಶಸ್ತ್ರ ಸೇವೆಗಳ ಕುರಿತಾದ ಸೆನೆಟ್ ಸಮಿತಿಗಳಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವ ಸೆನೆಟರ್‌ಗಳಾದ ಜೀನ್ ಶಾಹೀನ್, ಟಾಮ್ ಕಾಟನ್ ಮತ್ತು ರಿಚರ್ಡ್ ಬ್ಲೂಮೆಂಥಾಲ್ ಅವರ ಕಚೇರಿಗಳನ್ನು ಸಹ ಇದು ಸಂಪರ್ಕಿಸಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಖಮೇನಿ ವಿರುದ್ದ ತೀವ್ರಗೊಂಡ ಪ್ರತಿಭಟನೆ – ಇರಾನ್ ದೇಶಾದ್ಯಂತ ಇಂಟರ್ನೆಟ್ ಸ್ಥಗಿತ!

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!