Friday, December 5, 2025
Homeಟಾಪ್ ನ್ಯೂಸ್PAKISTAN: ʼಅಲ್ಲಾಹನು ನಮ್ಮನ್ನು ರಕ್ಷಿಸಲಿ'- ಸಂಸತ್ತಿನಲ್ಲಿ ಗಳಗಳನೇ ಅತ್ತ ಪಾಕ್‌ ಸಂಸದ: VIDEO

PAKISTAN: ʼಅಲ್ಲಾಹನು ನಮ್ಮನ್ನು ರಕ್ಷಿಸಲಿ’- ಸಂಸತ್ತಿನಲ್ಲಿ ಗಳಗಳನೇ ಅತ್ತ ಪಾಕ್‌ ಸಂಸದ: VIDEO

ಇಸ್ಲಾಮಾಬಾದ್‌: ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದಲ್ಲಿ ಭಯದ ವಾತಾವರಣವಿದೆ. ಭಾರತ ಮತ್ತೊಂದು ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಭಯಪಡುತ್ತಿದೆ. ಈ ನಡುವೆ ಪಿಎಂಎಲ್ಎನ್ (ಪಾಕಿಸ್ತಾನ ಮುಸ್ಲಿಂ ಲೀಗ್-ಎನ್) ಸಂಸದ ತಾಹಿರ್ ಇಕ್ಬಾಲ್ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕಣ್ಣೀರಿಟ್ಟಿದ್ದಾನೆ.

ಅಲ್ಲಾಹನು ನಮ್ಮನ್ನು ರಕ್ಷಿಸಲಿ ಎಂದು ತಾಹಿರ್ ಇಕ್ಬಾಲ್ ಪಾಕಿಸ್ತಾನ ಸಂಸತ್ತಿನಲ್ಲಿ ಅಳಲು ತೋಡಿಕೊಂಡಿದ್ದಾನೆ. ಇದರ ವೀಡಿಯೋ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸೇರಿದಂತೆ ಅನೇಕ ನಾಯಕರು ಭಾರತದ ಕ್ರಮದಿಂದ ಭಯಭೀತರಾಗಿದ್ದಾರೆ. ಮೇ 7 ರಂದು ಭಾರತೀಯ ಸೇನೆಯು ಪಿಒಕೆ ಮತ್ತು ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ವೈಮಾನಿಕ ದಾಳಿ ನಡೆಸಿ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತು. ಇದಾದ ಬಳಿಕ ಭಯಭೀತವಾದ ಪಾಕಿಸ್ತಾನವು ಭಾರತೀಯ ಸೇನೆಯ ಹಲವಾರು ಸೇನಾ ನೆಲೆಗಳನ್ನು ಗುರಿಯಾಗಿಸಲು ವಿಫಲ ಪ್ರಯತ್ನ ಮಾಡಿತು. ಪಾಕಿಸ್ತಾನ ಭಾರತದ 15 ನಗರಗಳನ್ನು ಗುರಿಯಾಗಿಸಲು ಪ್ರಯತ್ನಿಸಿತ್ತು, ಅದರಲ್ಲಿ 7 ನಗರಗಳು ಪಂಜಾಬ್‌ನಲ್ಲಿದ್ದವು. ಪಾಕಿಸ್ತಾನದ ಕ್ಷಿಪಣಿಯನ್ನು ಭಾರತದ ಎಸ್-400 ಆಕಾಶದಲ್ಲೇ ಹೊಡೆದುರುಳಿಸಿತು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಡೆಸಲಾದ ಕ್ಷಿಪಣಿ ದಾಳಿಗಳಲ್ಲಿ ಕನಿಷ್ಠ 100 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದರು. ಸಭೆಯಲ್ಲಿ ಹಾಜರಿದ್ದ ನಾಯಕರಿಗೆ ರಕ್ಷಣಾ ಸಚಿವರು, ಇದು ನಿರಂತರ ಕಾರ್ಯಾಚರಣೆಯಾಗಿದ್ದು, ಭಾರತದ ಗುರಿ ದಾಳಿಯ ನಂತರ ಪಾಕಿಸ್ತಾನ ಯಾವುದೇ ಮಿಲಿಟರಿ ಕ್ರಮ ಕೈಗೊಂಡರೆ, ಭಾರತ ಸೂಕ್ತ ಪ್ರತ್ಯುತ್ತರ ನೀಡುತ್ತದೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!