Friday, December 5, 2025
Homeಟಾಪ್ ನ್ಯೂಸ್IND PAK WAR : ಮೋದಿಯ ಹೆಸರೆತ್ತಲೂ ನಡುಗುವಂಥಾ ಹೇಡಿ ನಮ್ಮ ಪ್ರಧಾನಿ - ಪಾಕ್‌...

IND PAK WAR : ಮೋದಿಯ ಹೆಸರೆತ್ತಲೂ ನಡುಗುವಂಥಾ ಹೇಡಿ ನಮ್ಮ ಪ್ರಧಾನಿ – ಪಾಕ್‌ ಸಂಸದನಿಂದ ಗುಣಗಾನ!

ಇಸ್ಲಾಮಾಬಾದ್ : ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನ ವಾತಾವರಣ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಲೇ ಇದೆ, ಇದರ ನಡುವೆಯೇ ಪಾಕ್ ನ ಸಚಿವ ಶಾಹಿದ್ ಅಹ್ಮದ್ ಎಂಬುವವರು ತಮ್ಮದೇ ದೇಶದ ಪ್ರಧಾನಿಗೆ ಹೇಡಿ ಎಂದು ಕರೆದಿದ್ದು, ಪ್ರಧಾನಿ ಶೆಹಬಾಜ್ ಷರೀಫ್‌ಗೆ ಭಾರಿ ಮುಜುಗರವನ್ನುಂಟು ಮಾಡಿದೆ.

ಭಾರತವು ಪಾಕ್ ಮೇಲೆ ನಡೆಸುತ್ತಿರುವ ಮಿಸೈಲ್ ಗಳ ದಾಳಿಗೆ ಪಾಕ್ ಅಕ್ಷರಶಃ ನಲುಗಿ ಹೋಗಿದೆ, ಇದರ ನಡುವೆಯೇ ಪಾಕ್ ನ ಸಚಿವ ಶಾಹಿದ್ ಅಹ್ಮದ್ ಅವರು ಪ್ರಧಾನಿ ಶೆಹಬಾಜ್ ಷರೀಫ್‌ ವಿರುದ್ಧ ಹರಿಹಾಯ್ದಿದ್ದು,  ಪ್ರಧಾನಿ ಷರೀಫ್‌ ನಿಜಕ್ಕೂ ಹೇಡಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಹಿದ್ ಅಹ್ಮದ್ ಅವರು, ಭಾರತ ನಮ್ಮ ಮೇಲೆ ದಾಳಿ ನಡೆಸುತ್ತಲೇ ಇದ್ದರೂ ಕೂಡ ಪ್ರಧಾನಿಯವರಿಂದ ಒಂದೇ ಒಂದು ಹೇಳಿಕೆ ಬಂದಿಲ್ಲ, ಜೊತೆಗೆ ಗಡಿ ಭಾಗದಲ್ಲಿ ಸೈನಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದರು ಕೂಡ ಅವರ ಬಗ್ಗೆ ತುಟಿ ಬಿಚ್ಚದೆ ಕುಳಿತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಎಷ್ಟರ ಮಟ್ಟಿಗೆ ಸುಮ್ಮನಿದ್ದಾರೆ ಎಂದರೆ, ಪಕ್ಕದ ದೇಶದ ಪ್ರಧಾನಿ ಮೋದಿ ಅವರ ಹೆಸರು ಕೂಡ ಹೇಳಲಾಗದೆ ಹೇಡಿಯಂತಿದ್ದರು. ಇಂತಹವರು ಗಡಿಯಲ್ಲಿ ಧೈರ್ಯದಿಂದ ಹೊರಡುವ ಸೈನಿಕರಿಗೆ ಯಾವ ರೀತಿಯ ಸಂದೇಶವನ್ನು ನೀಡಬಲ್ಲರು ಎಂದು ಸಚಿವರೊಬ್ಬರು ಪ್ರಶ್ನಿಸಿದ್ದಾರೆ. 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!