Friday, December 5, 2025
Homeಟಾಪ್ ನ್ಯೂಸ್VIRAL NEWS : ಪಾಕಿಸ್ತಾನ ಭಾರತದ ಯಾವ ಜೆಟ್‌ಗಳನ್ನು ಹೊಡೆದುರುಳಿಸಿಲ್ಲ- ಸತ್ಯ ಸಂಗತಿ ಬಿಚ್ಚಿಟ್ಟ ಪಾಕ್...

VIRAL NEWS : ಪಾಕಿಸ್ತಾನ ಭಾರತದ ಯಾವ ಜೆಟ್‌ಗಳನ್ನು ಹೊಡೆದುರುಳಿಸಿಲ್ಲ- ಸತ್ಯ ಸಂಗತಿ ಬಿಚ್ಚಿಟ್ಟ ಪಾಕ್ ಪ್ರಜೆಯ ವಿಡಿಯೋ ವೈರಲ್

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ 9 ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ.ಆದ್ರೆ ಪಾಕಿಸ್ತಾನ ಯಾವುದೇ ಪ್ರತಿರೋಧ ಒಡ್ಡಲು ಸಾಧ್ಯವಾಗದೇ ಕೇವಲ ಸುಳ್ಳುಗಳನ್ನು ಹೇಳುತ್ತಾ ಕಾಲಹರಣ ಮಾಡುತ್ತಿದೆ.

ಈ ಎಲ್ಲಾ ವಿಚಾರಗಳ ಬಗ್ಗೆ ಖುದ್ದು ಪಾಕಿಸ್ತಾನದ ವ್ಯಕ್ತಿಯೊಬ್ಬ ಸತ್ಯ ಸಂಗತಿ ಮಾತನಾಡಿದ್ದು, ಈ ವ್ಯಕ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ಹೇಗೆ ತನ್ನ ದೇಶದ ಜನರಿಗೆ ಸುಳ್ಳುಗಳನ್ನು ಹೇಳುತ್ತಿದೆ ಎಂಬುದನ್ನು ಈತ ನಿರೂಪಿಸಿದ್ದಾನೆ.

ಭಾರತ ಪಾಕಿಸ್ತಾನದ ಮೇಲೆ 24 ಮಿಸೈಲ್ ಗಳನ್ನ ಹಾರಿಸಿದೆ. ಆದ್ರೆ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಂ ಒಂದೇ ಒಂದು ಕ್ಷಿಪಣಿಯನ್ನೂ ತಡೆಯಲು ಸಾಧ್ಯವಾಗಿಲ್ಲ. ಈ ಮೊದಲೇ ಭಾರತ ನುಗ್ಗಿ ಹೊಡೀತೀವಿ ಎಂದು ಹೇಳಿದ್ದರು. ಹಾಗೇ ಹೊಡೆದಿದ್ದಾರೆ ಕೂಡ. ಆದ್ರೆ ಪಾಕಿಸ್ತಾನ ಸೇನೆ ಇದನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದಿದ್ದಾನೆ.

ಇನ್ನು ಭಾರತ ಕೇವಲ ಉಗ್ರರ ಟಾರ್ಗೆಟ್‌ಗಳ ಮೇಲೆ ಮಾತ್ರ ದಾಳಿ ಮಾಡಿದೆ. ನಾಗರೀಕ ಪ್ರದೇಶಗಳ ಮೇಲೆ ದಾಳಿ ಮಾಡಿದ್ರೆ ಅದೆಷ್ಟು ಸಾವು ಸಂಭವಿಸುತ್ತಿತ್ತೋ ತಿಳಿಯದು. ಆದ್ರೆ ಪಾಕಿಸ್ತಾನ ಮಾತ್ರ ಭಾರತದ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾನೆ.

ಹೌದು ಪಾಕಿಸ್ತಾನ ಆ ರೀತಿ ಯಾವ ಭಾರತೀಯ ಜೆಟ್ ಗಳನ್ನು ಹೊಡೆದುರುಳಿಸಿಲ್ಲ. ಈ ಕುರಿತು ಪಾಕಿಸ್ತಾನ ಮೀಡಿಯಾಗಳಲ್ಲಿ ಬಿತ್ತರವಾಗುತ್ತಿರುವುದು ಒಂದು ವರ್ಷದ ಹಳೆ ವೀಡಿಯೋಗಳು. ನಾವು ಈ ಸತ್ಯವನ್ನ ಒಪ್ಪಿಕೊಳ್ಳಬೇಕು ಎಂದು ಪಾಕ್ ಪ್ರಜೆ ಈ ವಿಡಿಯೋ ಮೂಲಕ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿದ್ದಾನೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!