Wednesday, May 14, 2025
Homeಕ್ರೈಂPAKISTAN FLAG : ರಸ್ತೆಗೆ ಅಂಟಿಸಿದ್ದ ಧ್ವಜವನ್ನು ಮನೆಗೆ ಕೊಂಡೊಯ್ದು ಪಾಕ್‌ ಪ್ರೇಮ ಮೆರೆದ...

PAKISTAN FLAG : ರಸ್ತೆಗೆ ಅಂಟಿಸಿದ್ದ ಧ್ವಜವನ್ನು ಮನೆಗೆ ಕೊಂಡೊಯ್ದು ಪಾಕ್‌ ಪ್ರೇಮ ಮೆರೆದ ಮಹಿಳೆಯರು!

ಕಲಬುರಗಿ : ಪಹಲ್ಗಾಮ್‌ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಕಲಬುರಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ರಸ್ತೆಗೆ ಅಂಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಹಲವು ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಸಹ ಪಡೆಯಲಾಗಿತ್ತು.

ಈಗ ಕೆಲವು ಮುಸ್ಲಿಂ ಮಹಿಳೆಯರು ಪಾಕಿಸ್ತಾನದ ಧ್ವಜವನ್ನು ರಸ್ತೆಯಿಂದ ತೆಗೆದು ತಮ್ಮ ಮನೆಗೆ ಕೊಂಡೊಯ್ಯುವ ಮೂಲಕ ಪಾಕಿಸ್ತಾನ ಪ್ರೇಮ ಮೆರೆದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಗರದ ಜಗತ್‌ ವೃತ್ತ ಸೇರಿಂದತೆ ಹಲವೆಡೆ ರಸ್ತೆಗಳಲ್ಲಿ ಹಾಗೂ ಶೌಚಾಲಯಗಳಲ್ಲಿ ಪಾಕಿಸ್ತಾನದ ಧ್ವಜವನ್ನು ಅಂಟಿಸಿ ಬಜರಂಗದಳದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರೂ ಸಹ ದಾಖಲಾಗಿತ್ತು.

ಬಂಧಿಸಲ್ಪಟ್ಟ 6 ಮಂದಿಯ ವಿರುದ್ದ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಾರ್ವಜನಿಕರು ಯಾವುದೇ ಪ್ರತಿಭಟನೆಯನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸಬೇಕು ಎಂದು ಡಾ. ಎಸ್‌.ಡಿ ಶರಣಪ್ಪ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!