Wednesday, May 14, 2025
Homeಟಾಪ್ ನ್ಯೂಸ್PAKISTAN : ಲಾಹೋರ್‌ ಛಿದ್ರವಾಗುತ್ತಿದೆ, ಮೀಡಿಯಾ ಸುಳ್ಳು ಬೊಗಳುತ್ತಿದೆ - ಅಲ್ಲಾ ನಮ್ಮನ್ನು ಕ್ಷಮಿಸು ಎಂದ...

PAKISTAN : ಲಾಹೋರ್‌ ಛಿದ್ರವಾಗುತ್ತಿದೆ, ಮೀಡಿಯಾ ಸುಳ್ಳು ಬೊಗಳುತ್ತಿದೆ – ಅಲ್ಲಾ ನಮ್ಮನ್ನು ಕ್ಷಮಿಸು ಎಂದ ಪಾಕಿಸ್ತಾನಿ ನಾಗರಿಕ! VIDEO

ಪಾಕಿಸ್ತಾನ : ಪಹಲ್ಗಾಮ್‌ ಪ್ರತೀಕಾರದ ಹಿನ್ನೆಲೆಯಲ್ಲಿ ಭಾರತವು ತೆಗೆದುಕೊಂಡ ಕ್ರಮದ ಅಂಗವಾಗಿ ಮೇ.7 ರಿಂದ ಗಡಿಯಲ್ಲಿ ಏರ್‌ ಸ್ಟ್ರೈಕ್‌ ಪ್ರಾರಂಭವಾಗಿದೆ. ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆ ಇದುವರೆಗೂ ಮುಂದುವರೆದಿದ್ದು ಲಾಹೋರ್‌ ವರೆಗೂ ಭಾರತವು ಶೆಲ್‌ ದಾಳಿ ನಡೆಸುತ್ತಿರುವುದು ಪಾಕಿಸ್ತಾನದ ನಾಗರಿಕರಿಂದಲೇ ಖಚಿತಪಡಿಸಲ್ಪಟ್ಟಿದೆ.

ನೇರವಾಗಿ ವಿಡಿಯೋ ಮಾಡುತ್ತಿರುವ ಅಲ್ಲಿನ ನಾಗರಿಕ , ಪ್ರತಿ ಎರಡು ನಿಮಿಷಕ್ಕೆ ಒಂದು ಮಿಸೈಲ್‌ ಬಂದು ಲಾಹೋರ್‌ ಮೇಲೆ ಬೀಳುತ್ತಿದೆ. ಇಲ್ಲಂತೂ ಭಯಾನಕವಾದ ವಾತಾವರಣ ಸೃಷ್ಟಿಯಾಗಿದೆ. ಆದರೆ ಪಾಕಿಸ್ತಾನದ ಮೀಡಿಯಾಗಳು ಮಾತ್ರ ಸುಳ್ಳು ಹೇಳುತ್ತಿವೆ ಎಂದು ಅವಲತ್ತುಕೊಂಡಿದ್ದಾನೆ. ಅಲ್ಲದೇ ಪ್ರತಿಯೊಂದು ಜಾಗಜಾಗವನ್ನೂ ಭಾರತೀಯ ಸೇನೆ ಹುಡುಕಿ ಹುಡುಕಿ ಹೊಡೆಯುತ್ತಿದೆ ಎಂದು ಪಾಕ್‌ ಪ್ರಜೆ ಗೋಳು ತೋಡಿಕೊಂಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಇದುವರೆಗೂ ಪಾಕಿಸ್ತಾನದ ಮಾಧ್ಯಮಗಳು ಪಾಕ್ ದಾಳಿಯಿಂದಾಗಿ ಭಾರತ ಬೆಚ್ಚಿ ಬಿದ್ದಿದೆ. ಭಾರತದ 8-10 ರಫೇಲ್‌ ಯುದ್ಧವಿಮಾನಗಳನ್ನು ಪಾಕ್‌ ಹೊಡೆದುರುಳಿಸಿದೆ. ಭಾರತದಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ಅಸಂಬದ್ಧ , ಕಪೋಲಕಲ್ಪಿತ ಸುದ್ದಿಗಳನ್ನು ಹರಿಬಿಡುತ್ತಿದೆ. ಆದರೆ ಈ ಸುದ್ದಿಗಳನ್ನು ಪಾಕಿಸ್ತಾನಿ ನಾಗರಿಕರೆ ನಂಬಲು ಸಿದ್ದರಿಲ್ಲ.

ಹೆಚ್ಚಿನ ಸುದ್ದಿ

error: Content is protected !!