Sunday, June 7, 2026
Homeಟಾಪ್ ನ್ಯೂಸ್PAKISTAN : ಪಾಕ್‌ ಆರ್ಮಿ ಮುಖ್ಯಸ್ಥ ಅಸಿಮ್‌ ಮುನೀರ್‌ ಬಂಧನ ಕೇವಲ ವದಂತಿ -ಇಲ್ಲಿದೆ ಮಾಹಿತಿ

PAKISTAN : ಪಾಕ್‌ ಆರ್ಮಿ ಮುಖ್ಯಸ್ಥ ಅಸಿಮ್‌ ಮುನೀರ್‌ ಬಂಧನ ಕೇವಲ ವದಂತಿ -ಇಲ್ಲಿದೆ ಮಾಹಿತಿ

ನವದೆಹಲಿ/ಕರಾಚಿ : ಭಾರತವು ಆಪರೇಷನ್‌ ಸಿಂಧೂರ್‌ ಹೆಸರಿನಲ್ಲಿ ಪಾಕಿಸ್ತಾನವನ್ನು ಅಟ್ಟಾಡಿಸಿ ಹೊಡೆಯುತ್ತಿದೆ. ಇದೇ ಸಮಯದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್‌ ಮುನೀರ್‌ ನನ್ನು ಹುದ್ದಿಯಿಂದ ಕೆಳಗಿಳಿಸಲಾಗಿದ್ದು, ಕೂಡಲೇ ಬಂಧನಕ್ಕೂ ಸಹ ಒಳಪಡಿಸಲಾಗಿದ ಎಂಬ ಸುದ್ದಿಗಳು ಭಾರತದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಿಎಜೆಸಿಎಸ್‌ಸಿ ಎಂಬ ಪಾಕಿಸ್ತಾನದ ತನಿಖಾ ಸಂಸ್ಥೆ ಅಸಿಮ್‌ ಮುನೀರ್‌ ರನ್ನು ಹುದ್ದೆಯಿಂದ ಕೆಳಗಿಳಿಸಬೇಕು. ಹಾಗೂ ಆ ಸ್ಥಾನಕ್ಕೆ ಜನರಲ್‌ ಶಶಿರ್‌ ಶಮಂಹಶಾದ್‌ ಮಿರ್ಜಾ ಎಂಬುವವರನ್ನು ನೇಮಿಸಬೇಕೆಂದು ಒತ್ತಾಯಿಸಿದೆ ಎಂದೂ ಸಹ ಹೇಳಲಾಗಿದೆ. ಆದರೆ ಇದುವರೆಗೂ ಅಸಿಮ್‌ ಮುನಿರ್‌ ನನ್ನು ಬಂಧಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ದೊರೆತಿಲ್ಲ.

ಪಾಕಿಸ್ತಾನದ ಮಾಧ್ಯಮಗಳೂ ಸಹ ಈ ಬಗ್ಗೆ ಮೌನತಾಳಿವೆ.

ಐಎಸ್‌ಐ ಮೂಲಕ ನಿಯಂತ್ರಿಸಲ್ಪಿಡುತ್ತಿರುವ ಅಸಿಮ್‌ ಮುನೀರ್‌ ತನ್ನ ವೈಯಕ್ತಿಕ ಲಾಭಸಾಧನೆಗಾಗಿ ದೇಶವನ್ನು ಕೆಳಗೆ ತಳ್ಳಿದ್ದಾನೆ ಎಂದೂ ಸಹ ಆರೋಪಿಸಲಾಗಿದೆ. ಭಾರತದ ಮತ್ತು ಪಾಕ್‌ ನಡುವಿನ ಗಡಿಯ್ ವಿಶ‍್ವದ ಅತ್ಯಂತ ಎತ್ತರದ ಯುದ್ಧ ಭೂಮಿಯಲ್ಲಿ ಕಾರ್ಯಾಚರಣೆ ನಡೆಸಿರುವ ಅನುಭವ ಹೊಂದಿರುವ ಅಸಿಮ್‌ ಮುನೀರ್‌, ಪಾಕ್‌ ನ 28 ನೇ ಸೇನಾ ಜನರಲ್.‌

ಹೆಚ್ಚಿನ ಸುದ್ದಿ

Change Language »
error: Content is protected !!