ನವದೆಹಲಿ: 76ನೇ ಗಣರಾಜ್ಯೋತ್ಸವದ ಹಿನ್ನೆಲೆ ಶನಿವಾರ ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದವರ ಹೆಸರನ್ನು ಪ್ರಕಟಿಸಿದೆ. ಈ ಪೈಕಿ ಈ ಬಾರಿ ರಾಜ್ಯದ ಮೂವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ.
ಕಲಬುರಗಿ ಮೂಲದ ವಿಜಯಲಕ್ಷ್ಮಿ ದೇಶಮಾನೆ, ಬಾಗಲಕೋಟೆ ಮೂಲದ ವೆಂಕಪ್ಪ ಅಂಬಾಜೀ ಸುಗಟೇಕರ್ ಹಾಗೂ ಕೊಪ್ಪಳ ಮೂಲದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಗಣರಾಜ್ಯೋತ್ಸವಕ್ಕೂ ಮುನ್ನಾ ದಿನ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ:
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ (ಕರ್ನಾಟಕ)
ವೆಂಕಪ್ಪ ಅಂಬಾಜಿ ಸುಗಟೇಕರ್ (ಕರ್ನಾಟಕ)
ಎಲ್ ಹ್ಯಾಂಗ್‌ಥಿಂಗ್ (ನಾಗಾಲ್ಯಾಂಡ್)
ಹರಿಮನ್ ಶರ್ಮಾ (ಹಿಮಾಚಲ ಪ್ರದೇಶ)
ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಅರುಣಾಚಲ ಪ್ರದೇಶ)
ಜೋಯ್ನಾಚರಣ್ ಬತಾರಿ (ಅಸ್ಸಾಂ)
ನರೇನ್ ಗುರುಂಗ್ (ಸಿಕ್ಕಿಂ)
ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)
ಶೈಖಾ ಎ ಜೆ ಅಲ್ ಸಬಾಹ್ (ಕುವೈತ್)
ನಿರ್ಮಲಾ ದೇವಿ (ಬಿಹಾರ)
ಭೀಮ್ ಸಿಂಗ್ ಭಾವೇಶ್ (ಬಿಹಾರ)
ರಾಧಾ ಬಹಿನ್ ಭಟ್ (ಉತ್ತರಾಖಂಡ)
ಸುರೇಶ್ ಸೋನಿ (ಗುಜರಾತ್)
ಪಾಂಡಿ ರಾಮ್ ಮಾಂಡವಿ (ಛತ್ತೀಸ್‌ಗಢ)
ಜೋನಾಸ್ ಮಾಸೆಟ್ (ಬ್ರೆಜಿಲ್)
ಜಗದೀಶ್ ಜೋಶಿಲಾ (ಮಧ್ಯಪ್ರದೇಶ)
ಹರ್ವಿಂದರ್ ಸಿಂಗ್ (ಹರಿಯಾಣ)
ಭೇರು ಸಿಂಗ್ ಚೌಹಾಣ್ (ಮಧ್ಯಪ್ರದೇಶ)
ಪಿ ದಚ್ಚನಮೂರ್ತಿ (ಪುದುಚೇರಿ)
ಲಿಬಿಯಾ ಲೋಬೋ ಸರ್ದೇಸಾಯಿ (ಗೋವಾ)
ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)
ಹಗ್ ಗಂಟ್ಜರ್ (ಉತ್ತರಾಖಂಡ)
ಕೊಲೀನ್ ಗ್ಯಾಂಟ್ಜರ್ (ಉತ್ತರಾಖಂಡ)
ಡಾ. ನೀರ್ಜಾ ಭಟ್ಲಾ (ದೆಹಲಿ)