ಪದ್ಮನಾಭನಗರದಿಂದ ಜೆಡಿಎಸ್ ಪಕ್ಷದ ವತಿಯಿಂದ ನಾನು ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಸಿನಿಮಾ ನಿರ್ಮಾಪಕ ಕೆ.ಮಂಜು ಶುಕ್ರವಾರ ರಾತ್ರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹೊರಬಿದ್ದ ಕೂಡಲೇ ಮತ್ತೊಬ್ಬ ಜೆಡಿಎಸ್ ನಾಯಕ ಬಂಜಾರಪಾಳ್ಯ ಮಂಜುನಾಥ್ ಪದ್ಮನಾಭನಗರ ಟಿಕೆಟ್‍ನ್ನು ಈಗಾಗಲೇ ದೇವೇಗೌಡರು ಅಂತಿಮಗೊಳಿಸಿದ್ದು, ನನ್ನ ಮಗ ಕಾರ್ತಿಕ್ ಗೆ ಟಿಕೆಟ್ ಸಿಗುವುದು ಖಚಿತವಾಗಿದೆ ಎಂದಿದ್ದಾರೆ.
ಕಳೆದ ಮೂವತ್ತು ವರ್ಷಗಳಿಂದ ಪಕ್ಷದಲ್ಲಿ ಕ್ಷೇತ್ರ ಸಂಘಟನೆ ಮಾಡಿದ್ದೇನೆ. ನನ್ನ ಮಗ ಈಗಾಗಲೇ ರಾಜಕೀಯವಾಗಿ ಗುರುತಿಸಿಕೊಂಡಿದ್ದು, ಪ್ರಚಾರಕಾರ್ಯವನ್ನೂ ಪ್ರಾರಂಭಿಸಲಾಗಿದೆ. ನನಗೆ ಟಿಕೆಟ್ ನೀಡುವ ಬದಲು ನನ್ನ ಮಗನಿಗೆ ಟಿಕೆಟ್ ನೀಡುವಂತೆ ದೇವೇಗೌಡರಲ್ಲಿ ಮನವಿ ಮಾಡಿದ್ದು, ಅವರು ಒಪ್ಪಿಗೆಯನ್ನೂ ನೀಡಿದ್ದಾರೆ. ಹೀಗಾಗಿ ಕೆ. ಮಂಜು ಸ್ಪರ್ಧಿಸುವುದು ಅಸಾಧ್ಯ ಎಂದು ಬಂಜಾರಪಾಳ್ಯ ಮಂಜುನಾಥ್ ನುಡಿದಿದ್ದಾರೆ.