Thursday, March 27, 2025
Homeಟಾಪ್ ನ್ಯೂಸ್ಮೂರ್ತಿ ದಂಪತಿಗೆ ಪದ್ಮ ಪ್ರಶಸ್ತಿ: ಫೋಟೋ ಹಂಚಿಕೊಂಡ ಪುತ್ರ ರೋಹನ್ ಮೂರ್ತಿ

ಮೂರ್ತಿ ದಂಪತಿಗೆ ಪದ್ಮ ಪ್ರಶಸ್ತಿ: ಫೋಟೋ ಹಂಚಿಕೊಂಡ ಪುತ್ರ ರೋಹನ್ ಮೂರ್ತಿ

ಬೆಂಗಳೂರು: ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಗಳಿಗೆ 15 ವರ್ಷಗಳ ಅಂತರದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿ ಲಭಿಸಿದೆ. ತಂದೆ ತಾಯಿ ರಾ‌ಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋಗಳನ್ನು ಪುತ್ರ ರೋಹನ್ ಮೂರ್ತಿ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದಾರೆ.

2008ರಲ್ಲಿ ನಾರಾಯಣ ಮೂರ್ತಿ ಪದ್ಮವಿಭೂಷಣವನ್ನು ಸ್ವೀಕರಿಸಿದ 15 ವರ್ಷಗಳ ನಂತರ ಅವರ ಪತ್ನಿ ಸುಧಾ ಮೂರ್ತಿ ಪದ್ಮ ಭೂಷಣ ಪ್ರಶಸ್ತಿಯನ್ನು ಪವೆದಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂದಿರುವ ಪುತ್ರ ರೋಹನ್ ಮೂರ್ತಿ, ನಿಮ್ಮ ಮಗನಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇನ್ಫೋಸಿಸ್ ಫೌಂಡೇಶನ್ ಅನ್ನು ಸ್ಥಾಪಿಸಿ, 25 ವರ್ಷಗಳ ಕಾಲ ಮುನ್ನಡೆಸಿದ್ದಾರೆ. ನಾನು ಹೈಸ್ಕೂಲಿನಲ್ಲಿ ಓದಿತ್ತಿದ್ದಾಗ ನನ್ನ ತಾಯಿ ಎಂದಿಗೂ ಮನೆಯಲ್ಲಿ ಇರಲಿಲ್ಲ. ಸಾಮಾಜಿಕ ಕಾರ್ಯಗಳಲ್ಲಿಹೆಚ್ಚು ಭಾಗಿಯಾಗುತ್ತಿದ್ದರು. ಪ್ರವಾಹ, ಭೂಕಂಪಗಳ ಪರಿಹಾರ ಕಾರ್ಯಗಳು, ಬುಡಕಟ್ಟು ಸಮುದಾಯಗಳೊಂದಿಗೆ ಕೆಲಸ ಮಾಡುವುದು ಮತ್ತು ಇತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ತಂದೆ-ತಾಯಿ ಇಬ್ಬರಿಗೂ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!