ನವದೆಹಲಿ: ಗಣರಾಜ್ಯೋತ್ಸವದ ಬೆನ್ನಲ್ಲೇ ರಾಷ್ಟ್ರದ ಉನ್ನತ ಗೌರವಗಳ ಪೈಕಿ ಒಂದಾದ ಪದ್ಮ ಪ್ರಶಸ್ತಿ ಪ್ರಕಟವಾಗಿದ್ದು, ಒಟ್ಟು 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರಕಾರ ಪ್ರಕಟಿಸಿದೆ.
ಈಪೈಕಿ ಜಾನಪದ ಗಾಯಕಿ ದಿವಂಗತ ಶಾರದಾ ಸಿನ್ಹಾ, ಸುಜುಕಿ ಮೋಟಾರ್ ಸಂಸ್ಥೆಯ ಮಾಜಿ CEO ,ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಇನ್ನು ನಮ್ಮ ರಾಜ್ಯದ 9 ಮಂದಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಖ್ಯಾತ ಪಿಟೀಲು ವಾದಕ ಸುಬ್ರಮಣ್ಯಂ ಲಕ್ಷ್ಮೀನಾರಾಯಣ ಅವರಿಗೆ ಪದ್ಮ ವಿಭೂಷಣ, ಮತ್ತು ಲೇಖಕ- ಪತ್ರಕರ್ತ ಎ.ಸೂರ್ಯ ಪ್ರಕಾಶ್ ಹಾಗೂ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯ ಗೌರವ ಸಂದಿದೆ.
ಇನ್ನು ಪ್ರಖ್ಯಾತ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ಹಿರಿಯ ಕಲಾವಿದ ಕೊಪ್ಪಳ ಜಿಲ್ಲೆಯ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ, ಜೊತೆಗೆ ಬಾಗಲಕೋಟೆಯ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್ ಹಾಗೂ ಖ್ಯಾತ ವೈದ್ಯೆ, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕಿಯಾಗಿದ್ದ ಕ್ಯಾನ್ಸರ್ ತಜ್ಞೆ, ಕಲಬುರಗಿಯ ಡಾ. ವಿಜಯಲಕ್ಷ್ಮಿ ದೇಶಮಾನೆ ಕೂಡ ಈ ಗೌರವಕ್ಕೆ ಪಾತ್ರವಾಗಿದ್ದಾರೆ.