ಪ್ರಸಕ್ತ 2023 ನೇ ಸಾಲಿನಲ್ಲಿ ಘೋಷಣೆಯಾಗಿದ್ದ ಪದ್ಮಭೂಷಣ, ಪದ್ಮ ವಿಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತರಿಗೆ ಬುಧವಾರ ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಕೇಂದ್ರ ಸಚಿವೆ, ಸ್ಮøತಿ ಇರಾನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಹಲವು ವಿಶೇಷಗಳಿಗೆ ಈ ಪದ್ಮಪ್ರಶಸ್ತಿ ಪ್ರದಾನ ಸಮಾರಂಭ ಸಾಕ್ಷಿಯಾಯ್ತು. ಗುಜರಾತ್‍ನ ಹೀರಾಬಾಯ್‍ಬೇನ್ ಇಬ್ರಾಹಿಂ ಅವರು ಸಮಾಜಸೇವೆಗಾಗಿ ಪ್ರಶಸ್ತಿ ಪಡೆದ ಮಹಿಳೆಯಾಗಿದ್ದು, ಪ್ರಶಸ್ತಿ ಪಡೆಯುವ ಮುನ್ನ ಮೋದಿ ಮತ್ತಿತರರಿಗೆ ಆಶೀರ್ವಚನ ನೀಡಿದರು. ಜೊತೆಗೆ ರಾಷ್ಟ್ರಪತಿಯ ಹೆಗಲ ಮೇಲೆ ಕೈಹಾಕಿ ಫೋಟೋಗೆ ಪೋಸ್ ನೀಡಿದ್ದು ವಿಶೇಷವಾಗಿತ್ತು.
ಕನ್ನಡಿಗರಲ್ಲಿ ಎಂಟು ಮಂದಿಗೆ ಈ ಪದ್ಮಪ್ರಶಸ್ತಿಯ ಸುಯೋಗ ದೊರತಿದೆ. ಸಮಾಜ ಸೇವೆಯಲ್ಲಿ ಸುಧಾಮೂರ್ತಿ, ರಾಜಕಾರಣಿ ಎಸ್.ಎಂ. ಕೃಷ್ಣ ಸೇರಿದಂತೆ ವಿಜ್ಞಾನಿ ಖಾದರ್ ವಲಿ ದುಡೇಕುಲಾ, ತಮಟೆ ಕಲಾವಿದ ಮುನಿವೆಂಕಟಪ್ಪ, ಬಿದರಿ ಕಲಾವಿದ ಶಾ ರಶೀದ್ ಅಹ್ಮದ್ ಖಾದ್ರಿ, ಸಾಹಿತಿ ಎಸ್.ಎಲ್. ಭೈರಪ್ಪ, ಹಾಗೂ ಪುರಾತತ್ವ ಶಾಸ್ತ್ರಜ್ಞ ಎಸ್.ಸುಬ್ಬರಾವ್ ಪದ್ಮ ಪ್ರಶಸ್ತಿ ಸ್ವೀಕರಿಸಿದ ಕನ್ನಡಿಗರಾಗಿದ್ದಾರೆ.