Monday, January 19, 2026
Homeಟಾಪ್ ನ್ಯೂಸ್OPERATON SINDOOR : ಪ್ರಧಾನಿ ಮನೆಯ ಸಮೀಪದಲ್ಲಿಯೇ ಭಾರತದ ಶೆಲ್‌ ದಾಳಿ - ಪಾಕಿಸ್ತಾನ ಗಡಗಡ.!

OPERATON SINDOOR : ಪ್ರಧಾನಿ ಮನೆಯ ಸಮೀಪದಲ್ಲಿಯೇ ಭಾರತದ ಶೆಲ್‌ ದಾಳಿ – ಪಾಕಿಸ್ತಾನ ಗಡಗಡ.!

ಇಸ್ಲಾಮಾಬಾದ್ : ಭಾರತ ಹಾಗೂ ಪಾಕ್ ನಡುವೆ ಯುದ್ದ ಆರಂಭವಾಗಿದ್ದು, ಉಭಯ ದೇಶಗಳು ತಮ್ಮ ಸೇನೆಯ ಸಾಮರ್ಥ್ಯವನ್ನು ತೋರಿಸುತ್ತಿದೆ. ಇದರ ನಡುವೆಯೇ ಭಾರತದ ಈ ದಾಳಿಗೆ ಪ್ರಧಾನಿ ಷರೀಫ್ ಕೂಡ ನಲುಗಿ ಹೋಗಿದ್ದು, ಅವರ ಮನೆಯ ಪಕ್ಕದಲ್ಲೇ ಮಿಸೈಲ್ ಸ್ಫೋಟಗೊಂಡಿದೆ.

ಪಾಕ್ ದಾಳಿಗೆ ಪ್ರತಿಯಾಗಿ ಭಾರತ ಬೆಂಬಿಡದೆ ಪಾಕ್ ನ ಪ್ರಮುಖ ನಗರದ ಮೇಲೆ ದಾಳಿ ನಡೆಸುತ್ತಿದ್ದು, ಪಾಕ್ ಕ್ಷಿಪಣಿಯನ್ನು ಹೊಡೆದುರುಳಿಸಲು ಪರದಾಡುತ್ತಿದೆ. ಅಷ್ಟೇ ಅಲ್ಲದೆ ಭಾರತ ನಡೆಸಿದ ಕ್ಷಿಪಣಿ ದಾಳಿಗೆ ಪಾಕ್ ಅಕ್ಷರಶಃ ಕಂಗಾಲಾಗಿ ಹೋಗಿದೆ.

ಇದೀಗ ಭಾರತದ ಮಿಸೈಲ್ ವೊಂದು ಇಸ್ಲಾಮಾಬಾದ್‌ನಲ್ಲಿರುವ ಪಾಕ್ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರ ಮನೆಯಿಂದ 20 ಕಿಮೀ ದೂರದಲ್ಲೇ ಸ್ಫೋಟಗೊಂಡಿದ್ದು, ಭಾರೀ ಸದ್ದಾಗಿದೆ. ಭಾರತದ ಈ ದಾಳಿಯಿಂದ ಪ್ರಧಾನಿಯೇ ಬೆಚ್ಚಿಬಿದ್ದಿದಾರೆ.

ಈಗಾಗಲೇ ಪಾಕ್ ನ ಪ್ರಮುಖ ನಗರದ ಮೇಲೆ ಭಾರತ ಮಿಸೈಲ್ ದಾಳಿ ನಡೆಸುತ್ತಿದ್ದು, ಪಾಕ್ ಗೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ರಾತ್ರಿಯಾಗುತ್ತಿದ್ದಂತೆ ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗಿದೆ.

ಇನ್ನು ಭಾರತದ ಮೇಲೆ ದಂಡೆತ್ತಿ ಬಂದಿದ್ದ ಪಾಕ್ ಸೇನೆಯ ಪೈಲಟ್ ಓರ್ವನನ್ನು ಭಾರತೀಯ ಸೇನೆಯು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!