Thursday, March 12, 2026
Homeಟಾಪ್ ನ್ಯೂಸ್OPERATION SINDHOOR : ಆಪರೇಷನ್ ಸಿಂಧೂರ 2.O ಶುರು- ಭಾರತದ 27 ಏರ್‌ಪೋರ್ಟ್‌ಗಳು ಬಂದ್

OPERATION SINDHOOR : ಆಪರೇಷನ್ ಸಿಂಧೂರ 2.O ಶುರು- ಭಾರತದ 27 ಏರ್‌ಪೋರ್ಟ್‌ಗಳು ಬಂದ್

ನವದೆಹಲಿ: ಈಗಾಗಲೇ ಆಪರೇಷನ್ ಸಿಂಧೂರ ಆರಂಭಿಸಿರುವ ಭಾರತ, ಉಗ್ರರ ತಾಣಗಳನ್ನು ಉಡೀಸ್ ಮಾಡಿದ್ದು, ಇಷ್ಟು ಮಾತ್ರಕ್ಕೆ ಆಪರೇಷನ್ ಮುಗಿದಂತೆ ಕಾಣುತ್ತಿಲ್ಲ. ಹೌದು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಆಪರೇಷನ್ ಸಿಂಧೂ‌ರ್ 2.O ಮುಂದುವರೆಸಿದೆ. ಹೀಗಾಗಿ ಭಾರತದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನತೆ ಮನೆ ಮಾಡಿದ್ದು ಯಾವುದೇ ಕ್ಷಣದಲ್ಲಿ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಯಿದ್ದು ಭಾರತದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಹೀಗಾಗಿ ಹಲವು ವಾಯು ಮಾರ್ಗಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಭಾರತದಲ್ಲಿ ಸದ್ಯ 27 ವಿಮಾನ ನಿಲ್ದಾಣಗಳು ಸದ್ಯ ಬಂದ್ ಆಗಿವೆ. ಮುಂದಿನ 3 ದಿನ ಮೇ 10ರ ಮುಂಜಾನೆ 5:30 ರವರೆಗೂ 27 ವಿಮಾನ ನಿಲ್ದಾಣಗಳು ಬಂದ್‌ ಇರಲಿವೆ ಎನ್ನಲಾಗಿದೆ.ಇದರ ಜೊತೆಗೆ ಇಂದು ಒಂದೇ ದಿನ 430 ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!