ನವದೆಹಲಿ: ಸೌದಿ ಅರೇಬಿಯಾ ಸೇರಿದಂತೆ ಇತರ ಒಪೆಕ್ ಪ್ಲಸ್ ತೈಲ ಉತ್ಪಾದಕ ದೇಶಗಳು ಉತ್ಪಾದನೆ ಕಡಿತಗೊಳಿಸುವುದಾಗಿ ಘೋಷಿಸಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದ್ದು, 100ರ ಗಡಿ ದಾಟಿರುವ ತೈಲ ಗ್ರಾಹಕನ ಜೇಬಿಗೆ ಕತ್ತರಿ ಹಾಕಲಿದೆ.
ಮೇ ಕೊನೆಯವರೆಗಿನ ತನ್ನ ಸರಾಸರಿ 11.5 ಮಿಲಿಯನ್ ಬ್ಯಾರೆಲ್ ಉತ್ಪಾದನೆಯಲ್ಲಿ 5,00,000 ಬ್ಯಾರೆಲ್ ಕಡಿತಗೊಳಿಸುವುದಾಗಿ ಸೌದಿ ಅರೇಬಿಯಾ ಈಗಾಗಲೇ ಘೋಷಿಸಿದೆ. ಈ ಘೋಷಣೆ ಹಿನ್ನೆಲೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಬ್ಯಾರಲ್ ಗೆ 5 ಡಾಲರ್ ನಷ್ಟು ದರ ಏರಿಕೆಯಾಗಿದೆ.
ಇದೇ ಸಂದರ್ಭ ರಷ್ಯಾ ಕೂಡ ತೈಲೋತ್ಪಾದನೆಯಲ್ಲಿ ದಿನಕ್ಕೆ 5,00,000 ಬ್ಯಾರಲ್ ನಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ.
ಈ ಎಲ್ಲದರ ಪರಿಣಾಮ ಕಚ್ಚಾ ತೈಲ ಬ್ಯಾರಲ್‌ಗೆ 10 ಡಾಲರ್ ನಷ್ಟು ಹೆಚ್ಚುವ ಸಾಧ್ಯತೆ ಇದೆ.