ನವದಹೆಲಿ : ಭಯೋತ್ಪಾದಕರನ್ನು ಕೊಲ್ಲುವ ಬದಲು ಸೆರೆ ಹಿಡಿಯಬೇಕು ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.
ಇಂದು ಬದ್ಗಾಮ್ನಲ್ಲಿ ನಡೆದ ಭಯೋತ್ಪಾದಕರ-ಭದ್ರತಾಪಡೆ ನಡುವಿನ ಕಾರ್ಯಾಚರಣೆ ವೇಳೆ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫಾರೂಕ್, ಭಯೋತ್ಪಾದಕರನ್ನು ಸೆರೆ ಹಿಡಿದರೆ ಅವರು ನಡೆಸುವ ದಾಳಿ ಹಿಂದೆ ಯಾರಿದ್ದಾರೆ ಎಂದು ತಿಳಿಯಬಹುದು ಎಂದ್ದಾರೆ.
ಉಗ್ರರು ದಾಳಿ ಮಾಡುವಾಗ ಅವರನ್ನು ಮಟ್ಯಾಶ್ ಮಾಡದೇ ಸೆರೆ ಹಿಡಿಯಬೇಕು ಎಂಬ ಫಾರೂಕ್ ಅವರ ನಿಲುವಿಗೆ ವಿಪಕ್ಷಗಳು ಕಿಡಿಕಾರಿವೆ. ಜಮ್ಮು-ಕಾಶ್ಮೀರದ ರಾಜಕೀಯ ವಲಯದಲ್ಲಿ ಮತ್ತೆ ಭಯೋತ್ಪಾದಕರೆಡೆಗೆ ಸಹಾನುಭೂತಿಯ ಟ್ರೆಂಡ್ ಆರಂಭವಾದಂತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಭಯೋತ್ಪಾದಕರ ದಾಳಿಗೆ ಕಾರಣ, ಹೊಸ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದವರೇ ಈ ಕೃತ್ಯ ಎಸಗಿದ್ದಾರೆಯೇ ಎಂಬ ಅನುಮಾನ ನನಗಿದೆ ಎಂದು ಫಾರೂಕ್ ಹೇಳಿದ್ದಾರೆ. ಒಂದು ವೇಳೆ ಭಯೋತ್ಪಾದಕರು ಸಿಕ್ಕಿಬಿದ್ದರೆ ಈ ರೀತಿ ದಾಳಿ ಯಾರು ಮಾಡಿಸುತ್ತಿದ್ದಾರೆ, ಯಾಕೆ ಎಂಬುವುದು ಗೊತ್ತಾಗುತ್ತದೆ ಎಂದು ಪುನರುಚ್ಚರಿಸಿದರು.