ವೃದ್ಧ ವ್ಯಕ್ತಿಯೊಬ್ಬರು ಕೆಎಸ್‌ಆರ್‌ಟಿಸಿ ಬಸ್ ಒಂದರಲ್ಲಿ ಅಂಟಿಸಿದ್ದ ಜಾಹಿರಾತಿನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಚಿತ್ರಕ್ಕೆ ಮುತ್ತಿಕ್ಕುವ ವಿಡಿಯೋವೊಂದು ವೈರಲ್ ಆಗಿದೆ.
“ಸಾವಿರ ರೂ. ಬರ್ತಿತ್ತು.. 500 ರೂ. ಹೆಚ್ಚು ಮಾಡಿದ್ದೀಯಾ.. ನಿನ್ನ ಆರೋಗ್ಯ ರಕ್ಷಣೆಗೆ 5 ಲಕ್ಷ ರೂ. ಕೊಡ್ತೀನಿ ಅಂದಿದ್ದೀಯಾ.. ನನ್ನ ತಂದೆ ಲೋಕವನ್ನೇ ಗೆದ್ದವನೇ” ಇದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ರಾಜ್ಯ ವಿಧಾನಸಭಾ ಚುನಾವಣೆ ರಂಗೇರುತ್ತಿರುವ ಹಿನ್ನೆಲೆಯಲ್ಲಿ ವೃದ್ಧ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿ, ಮೋದಿ ಭಾವಚಿತ್ರಕ್ಕೆ ಮುತ್ತಿಕ್ಕುತ್ತಿರುವ ವಿಡಿಯೋ ವೈರಲ್ ಆಗಿದ್ದು ಬಿಜೆಪಿ ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಸಾವಿರ ರೂ. ಬರ್ತಿತ್ತು. 500 ರೂ, ಹೆಚ್ಚಿಗೆ ಮಾಡಿದ್ದೀಯಾ. ನಿನ್ನ ಮನೆ ಮುಂದೆ ಹಸಿರಾಗಿರಬೇಕು ಎಂದು ಹೇಳಿದ್ದೀಯಾ, ನಿನ್ನ ಆರೋಗ್ಯಕ್ಕೆ ಒಂದು ವರ್ಷಕ್ಕೆ 5 ಲಕ್ಷ ರೂ. ಕೊಡ್ತೀನಿ ಅಂದಿದ್ದೀಯಾ.. ನೀನು ಲೋಕವನ್ನೇ ಗೆದ್ದಿದೀಯಾ.. ನಿನ್ನ ಪಾದಕ್ಕೆ ನಮಸ್ಕಾರ.. ನಿನ್ನ ಪಾದಕ್ಕೆ ನಮಸ್ಕಾರ ಮೋದಿ ಎಂದು ವ್ಯಕ್ತಿ ಹೇಳಿದ್ದಾರೆ