Thursday, March 27, 2025
Homeಟಾಪ್ ನ್ಯೂಸ್ಶಾಸಕರ ಪುತ್ರ ಕಾರನ್ನು ತಪಾಸಣೆ ಮಾಡದ ಅಧಿಕಾರಿಗಳು: ತಹಶೀಲ್ದಾರ್‌ ತರಾಟೆ

ಶಾಸಕರ ಪುತ್ರ ಕಾರನ್ನು ತಪಾಸಣೆ ಮಾಡದ ಅಧಿಕಾರಿಗಳು: ತಹಶೀಲ್ದಾರ್‌ ತರಾಟೆ

ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿರೋದ್ರಿಂದ ಅಲ್ಲಲ್ಲಿ ವಾಹನ ತಪಾಸಣೆಗಳಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಆದರೆ, ಬೆಳಗಾವಿಯಲ್ಲಿ ಶಾಸಕರೊಬ್ಬರ ಪುತ್ರರ ಕಾರನ್ನು ತಪಾಸಣೆ ಮಾಡದೆ ಬಿಟ್ಟಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಕಾಗವಾಡ ಹಾಲಿ ಶಾಸಕ ಹಾಗೂ ಮಾಜಿ ಜವಳಿ ಖಾತೆ ಸಚಿವ ಶಾಸಕ ಶ್ರೀಮಂತ ಪಾಟೀಲ ಅವರ ಪುತ್ರನ ವಾಹನ ಚೆಕ್ ಮಾಡದ ಅಧಿಕಾರಿಗಳು ಹಾಗೆಯೇ ಬಿಟ್ಟು ಕಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಹೊರವಲಯದಲ್ಲಿರುವ ಚುಣಾವಣಾ ಚೆಕ್‌ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದ ಅಧಿಕಾರಿಗಳು ಶಾಸಕರ ಪುತ್ರ ಶ್ರೀನೀವಾಸ ಪಾಟೀಲರ ವಾಹನವನ್ನು ಪರಿಶೀಲಿಸದೆ ಬಿಟ್ಟಿರುವ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್‌ ಮಾಡಿ ಹರಿ ಬಿಟ್ಟಿದ್ದಾರೆ. ವಿಡಿಯೋ ವೈರಲ್‌ ಆಗುತ್ತಿದ್ದಂತೆ ʼಜನ ಸಾಮಾನ್ಯರಿಗೂಂದು ನ್ಯಾಯ ಜನಪ್ರತಿನಿಧಿಗಳ ಮಕ್ಕಳಿಗೆ ಒಂದು ನ್ಯಾಯʼನಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿತ್ತು.

ಶಾಸಕರ ಪುತ್ರನ ವಾಹನ ಚೆಕ್ ಮಾಡದ ವಿಷಯ‌ ತಿಳಿದ ಕಾಗವಾಡ ತಹಸೀಲ್ದಾರ್ ಸ್ಥಳಕ್ಕೆ ದೌಡಾಯಿಸಿದ್ದು, ವಾಹನ ಪರಿಶೀಲಿಸದೆ ಕಳುಹಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೋಮ್ಮೆ ಈ ರೀತಿ ಆಗಿದ್ದೆ ಆದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!