Monday, November 4, 2024
Homeಟಾಪ್ ನ್ಯೂಸ್​ರೈಲ್ವೇ ಪ್ಲಾಟ್‌ಫಾರಂನಲ್ಲಿ ಬಿತ್ತರವಾಯ್ತು ಅಶ್ಲೀಲ ವಿಡಿಯೋ: ಜನರಿಗೆ ಮುಜುಗರ

​ರೈಲ್ವೇ ಪ್ಲಾಟ್‌ಫಾರಂನಲ್ಲಿ ಬಿತ್ತರವಾಯ್ತು ಅಶ್ಲೀಲ ವಿಡಿಯೋ: ಜನರಿಗೆ ಮುಜುಗರ

ಪಾಟ್ನಾ: ಬಿಹಾರದ ಪಾಟ್ನಾದ ರೈಲ್ವೇ ನಿಲ್ದಾಣದಲ್ಲಿನ ಜಾಹೀರಾತು ಡಿಸ್ಪ್ಲೇ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೋ ಪ್ಲೇ ಆಗಿದ್ದು ರೈಲ್ವೇ ಅಧಿಕಾರಿಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳ ಬದಲಿಗೆ ಎಲ್ಇಡಿ ಪರದೆಗಳಲ್ಲಿ ಪಾರ್ನ್ ಕ್ಲಿಪ್ ಬಿತ್ತರಗೊಂಡಿದೆ. ಅಶ್ಲೀಲ ದೃಶ್ಯಗಳು ಸುಮಾರು 3 ನಿಮಿಷಗಳ ಕಾಲ ಪ್ರದರ್ಶನಗೊಂಡಿದ್ದು ಅನೇಕ ಪ್ರಯಾಣಿಕರು ಅದನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ.

ಮುಜುಗರಕ್ಕೊಳಗಾದ ಸಾರ್ವಜನಿಕರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ದೂರು ನೀಡಿದ ಮೇಲೆ ರೈಲ್ವೆ ರಕ್ಷಣಾ ಪಡೆ ದೃಶ್ಯಾವಳಿಗಳನ್ನು ನಿಲ್ಲಿಸಿತು.

ಸಾಮಾಜಿಕ ತಾಣಗಳಲ್ಲಿ ಈ ವಿಚಾರ ವೈರಲ್ ಆಗಿ, ಜನ ತಮ್ಮ ಪೋಸ್ಟ್‌ಗಳಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ರೈಲ್ವೆ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ.

ದತ್ತಾ ಕಮ್ಯುನಿಕೇಷನ್ ಎಂಬ ಏಜೆನ್ಸಿ ರೈಲ್ವೇ ನಿಲ್ದಾಣದಲ್ಲಿ ಜಾಹಿರಾತು ಬಿತ್ತರಿಸುವ ಕೆಲಸದ ಗುತ್ತಿಗೆ ಪಡೆದಿತ್ತು. ಈ ಘಟನೆಯ ನಂತರ ದತ್ತಾ ಕಮ್ಯುನಿಕೇಷನ್ ವಿರುದ್ಧ ಎಫ್‌ಐಆರ್ ದಾಖಲಿಸಿ ಏಜೆನ್ಸಿಯನ್ನು ರೈಲ್ವೇ ಇಲಾಖೆ ಕಪ್ಪುಪಟ್ಟಿಗೆ ಸೇರಿಸಿದೆ. ಈ ಕುರಿತು ರೈಲ್ವೇ ಇಲಾಖೆ ತನಿಖೆ ಆರಂಭಿಸಿದೆ

ಹೆಚ್ಚಿನ ಸುದ್ದಿ

error: Content is protected !!