Friday, December 5, 2025
Homeಲೈಫ್ ಸ್ಟೈಲ್Breakfast Recipe: ಬೆಳಗ್ಗೆ ತಿಂಡಿಗೆ ಮಾಡಿ ಸ್ಪೆಷಲ್ ಓಟ್ಸ್ ಪಡ್ಡು..! 10 ನಿಮಿಷ ಸಾಕು

Breakfast Recipe: ಬೆಳಗ್ಗೆ ತಿಂಡಿಗೆ ಮಾಡಿ ಸ್ಪೆಷಲ್ ಓಟ್ಸ್ ಪಡ್ಡು..! 10 ನಿಮಿಷ ಸಾಕು

ಈಗ ಬೇಸಿಗೆ ರಜೆ ಬೇರೆ, ಹಾಲಿಡೇ ಇರೋ ಕಾರಣ ಸ್ವಲ್ಪ ಸಮಯ ಹೆಚ್ಚು ಮಲಗೋಣ ಎಂದು ಗೃಹಿಣಿಯರು ಪ್ಲಾನ್ ಆಲ್ಲಿ ಇರುತ್ತಾರೆ. ಅಷ್ಟೇ ತಡವಾಗಿ ಎದ್ದರೂ ತಿಂಡಿ ಮಾಡಲೇಬೇಕು. ಹೊರಗಿನ ಆಹಾರ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಗೃಹಿಣಿಯರು ತಡವಾದರೂ,ಎಷ್ಟೇ ಕಷ್ಟ ಎನಿಸಿದರೂ ರಜೆಯಲ್ಲೂ ಮನೆಯಲ್ಲಿಯೇ ತಿಂಡಿ ಸಿದ್ಧ ಮಾಡಲ್ಲೆ ಬೇಕು. ಅದಕ್ಕೆ ನಾವಿಂದು ಸರಳವಾಗಿ, ವೇಗವಾಗಿ ಜೊತೆಗೆ ರುಚಿಕರವಾಗಿ ಮಾಡ ಬಹುದಾದ ರೆಸಿಪಿಯನ್ನು ತಿಳಿಸುತ್ತಿದ್ದೇವೆ.

ಹೌದು ಇಂದು ನಾವಿಲ್ಲಿ ಓಟ್ಸ್ ನಿಂದ ತಯಾರಿಸ ಬಹುದಾದ ಪಡ್ಡು ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದು, ಅದಕ್ಕೆ ಬೇಕಾಗುವ ಸಾಮಗ್ರಿಗಳು ಹೀಗಿದೆ.

ಬೇಕಾಗುವ ಸಾಮಗ್ರಿಗಳು 

ಓಟ್ಸ್ ಪೌಡರ್

ಉದ್ದಿನ ಬೇಳೆ

ಕೆಂಪು ಮೆಣಸಿನ ಪೌಡರ್

ಉಪ್ಪು

ಕಪ್ಪು ಮೆಣಸು

ಈರುಳ್ಳಿ

ಕ್ಯಾರೆಟ್

ಡೊಳ್ಳು ಮೆಣಸು

ತುಪ್ಪ / ಎಣ್ಣೆ

 

ಮಾಡುವ ವಿಧಾನ

ಮೊದಲನೆಯದಾಗಿ ನೆನೆಸಿದ ಉದ್ದಿನಬೇಳೆಯನ್ನು ತೆಗೆದುಕೊಂಡು ನಯವಾಗಿ ರುಬ್ಬಿಕೊಳ್ಳಿ. ಅದಕ್ಕೆ ಓಟ್ಸ್ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಕರಿಮೆಣಸು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ.

ಅದನ್ನು ಬೆರೆಸಿದ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ. ನಂತರ ಪಡ್ಡು ಕಾವಲಿಯನ್ನು ತೆಗೆದುಕೊಂಡು ಅದರಲ್ಲಿ ಈ ಹಿಟ್ಟಿನ ಮಿಶ್ರಣ ಹಾಕಿ, ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಬೇಕು, ಬಳಿಕ ಅದನ್ನು ಹೊರತೆಗೆಯಿರಿ. ಇದಕ್ಕೆ ನಿಮ್ಮ ಆಯ್ಕೆಯ ಕೆಲವು ತರಕಾರಿಗಳನ್ನು ಕೂಡ ಸೇರಿಸಬಹುದು.

ಈಗ ಬಿಸಿ ಬಿಸಿ ಓಟ್ಸ್ ಪಡ್ಡು ಸವಿಯಲು ಸಿದ್ಧವಾಗಿದ್ದು, ಅದನ್ನು ಕಾಯಿ ಚಟ್ನಿ ಅಥವಾ ಕಾರು ಚಟ್ನಿ ಜೊತೆ ಸೇವಿಸಬಹುದು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!