ದಾವಣಗೆರೆ: ದೇವರಿಗೆ ಹೂವಿನ ಹಾರ ಹಾಕಿ ಮೆರವಣಿಗೆ ಮಾಡುವುದು ವಾಡಿಕೆ. ಆದರೆ ಇಲ್ಲೊಂದು ದೇವರಿಗೆ ನೋಟಿನ ಹಾರವನ್ನೇ ಹಾಕಿ ಮೆರವಣಿಗೆ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರಿನಲ್ಲಿ ನಡೆಯುವ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಆಂಜನೇಯ ಸ್ವಾಮಿಗೆ ನೋಟಿನ ಹಾರ ಹಾಕಿರುವ ಘಟನೆ ನಡೆದಿದೆ.
ಆಂಜನೇಯ ಸ್ವಾಮಿಗೆ ನೋಟಿನ ಹಾರ ಹಾಕಿರುವ ಫೋಟೋ, ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೋಟಿನ ಹಾರದಲ್ಲಿ ಮುಳುಗಿದ ಆಂಜನೇಯ ಸ್ವಾಮಿಯನ್ನು ಭಕ್ತರು ಮುಗಿಬಿದ್ದು ದರ್ಶನ ಮಾಡಿದ್ದಾರೆ. ಇಷ್ಟಾರ್ಥ ಸಿದ್ದಿಗಾಗಿ ನೋಟಿನ ಹಾರ ಹಾಕುವ ಭಕ್ತರು ಆಂಜನೇಯನಿಗೆ ಪೂಜಿಸಿ ಭಕ್ತಿ ಮೆರೆದಿದ್ದಾರೆ.
ಪ್ರತಿ ವರ್ಷ ನಡೆದುಕೊಂಡು ಬಂದಿರುವ ಪದ್ದತಿ ಇದಾಗಿದ್ದು, ತಮ್ಮ ಏನೇ ಬೇಡಿಕೆ ಇದ್ದರೂ ಆಂಜನೇಯ ಪೂರೈಸುತ್ತಾನೆ ಅಂತ ಬೇಡಿಕೊಂಡು ನೋಟಿನ ಹಾರವನ್ನು ಭಕ್ತರು ಹಾಕುತ್ತಾರೆ. ಈ ಪೈಕಿ 10-20-50-100 ಹಣದ ನೋಟಿನ ಹಾರ ಮಾಡಿ ಆಂಜನೇಯ ಪಲ್ಲಕ್ಕಿಗೆ ಭಕ್ತರು ಹಾಕುತ್ತಾರೆ.