ನ್ಯೂಯಾರ್ಕ್: ಜೋ ಬೈಡನ್ ಆಡಳಿತಾವಧಿಯಲ್ಲಿ ಜಗತ್ತು ಪರಮಾಣು ವಿಶ್ವ ಮಹಾಯುದ್ಧಕ್ಕೆ ಸಾಕ್ಷಿಯಾಗಲಿದ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಕೋರ್ಟ್ ಗೆ ಶರಣಾದ ಬಳಿಕ ಮೊತ್ತಮೊದಲ ಬಾರಿಗೆ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದರು.
ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ವಿವಿಧ ದೇಶಗಳಿಂದ ಬಹಿರಂಗ ಬೆದರಿಕೆಗಳಿವೆ. ತನ್ನ ಆಡಳಿತದ ಅವಧಿಯಲ್ಲಿ ಇತರ ರಾಷ್ಟ್ರಗಳು ಎಂದಿಗೂ ಈ ಬಗ್ಗೆ ಎಂದೂ ಪ್ರಸ್ತಾಪಿಸಲಿಲ್ಲ ಎಂದವರು ಹೇಳಿದರು.
ಬೈಡನ್ ನಾಯಕತ್ವದಲ್ಲಿ ಸಂಪೂರ್ಣ ಮೂರನೇ ಪರಮಾಣು ವಿಶ್ವ ಯುದ್ಧ ಸಂಭವಿಸಬಹುದು. ನಾವು ಅದರಿಂದ ಬಹಳ ದೂರದಲ್ಲಿಲ್ಲ ಎಂದವರು ಹೇಳಿದರು.