Saturday, January 25, 2025
Homeಟಾಪ್ ನ್ಯೂಸ್ಒಂದು ಕುಟುಂಬಕ್ಕೆ ಎರಡು ಟಿಕೆಟ್ ಇಲ್ಲ: ಸೋಮಣ್ಣ

ಒಂದು ಕುಟುಂಬಕ್ಕೆ ಎರಡು ಟಿಕೆಟ್ ಇಲ್ಲ: ಸೋಮಣ್ಣ

ತುಮಕೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಒಂದು ಕುಟುಂಬಕ್ಕೆ ಎರಡು ಟಿಕೆಟ್ ಇಲ್ಲ. ಯಡಿಯೂರಪ್ಪ ಅವರು ಮಗನಿಗೆ ಟಿಕೆಟ್ ಬಿಟ್ಟು ಕೊಟ್ಟಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ನುಡಿದರು.

ಸಿದ್ದಗಂಗಾ ಮಠಕ್ಕೆ ಭೇಟಿ ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ಟಿಕೆಟ್ ಕುರಿತಾಗಿ ನಿರ್ಧಾರ ಮಾಡುವುದಕ್ಕೆ ನಾನು ಹೈಕಮಂಡ್ ಅಲ್ಲ. ಟಿಕೆಟ್ ಕೊಡೋದು ಬಿಡೋದು ವರಿಷ್ಠರಿಗೆ ಬಿಟ್ಟ ವಿಚಾರ. ಅರ್ಹತೆ ಇರೋರಿಗೆ ಕೊಡ್ತಾರೆ. ನಮ್ಮ ಮಗನಿಗೆ ಕೊಟ್ರೆ ಕೆಲಸ ಮಾಡ್ತಾನೆ, ಹೋರಾಟ ಮಾಡ್ತಾನೆ. ಕಾರ್ಯಕರ್ತರು ಪಕ್ಷದ ಮುಖಂಡರೆಲ್ಲ ಸೇರಿ ಕೆಲಸ ಮಾಡ್ತಾರೆ. ಕೊಟ್ರು ಸಂತೋಷ ಕೊಡದೇ ಹೋದ್ರು ತೊಂದರೆ ಇಲ್ಲ ಎಂದು ಹೇಳಿದರು.

ರಾಜ್ಯದ ರಾಜಕಾರಣದಲ್ಲಿ ಡಬಲ್ ಇಂಜಿನ್ ಸರ್ಕಾರ ಅನೇಕ ಜನಪರ ಕೆಲಸಗಳನ್ನ ಮಾಡಿದೆ. ಆದ್ದರಿಂದ ಉಪಯೋಗ ಏನಾಗ್ಬೇಕು ಅಂತ ಜನರಿಗೆ ಗೊತ್ತಿದೆ ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿ ರಾಷ್ಟ್ರ ಕಂಡ ಮಹಾತಪಸ್ವಿಗರು. ಅನ್ನದಾತರು, ವಿದ್ಯಾದಾನಿಗಳು. ನಮಗೂ ಪೂಜ್ಯರಿಗೂ ಅವಿನಾಭಾವ ಸಂಬAಧ ಇದೆ. ಮಠಕ್ಕೂ ನಮಗೂ ಅವಿನಾಭಾವ ಸಂಬAಧವಿದೆ ಎಂದು ಹೇಳಿದರು.

ಹೆಚ್ಚಿನ ಸುದ್ದಿ

error: Content is protected !!