Saturday, May 16, 2026
Homeಟಾಪ್ ನ್ಯೂಸ್BREAKFAST RECIPE: ಹಿಟ್ಟು ಹುದುಗಿಸುವ ಅವಶ್ಯಕತೆಯೇ ಇಲ್ಲ- ಧಿಡೀರ್ ಉಪಾಹಾರಕ್ಕೆ ಟೊಮೆಟೊ ದೋಸೆ ಬೆಸ್ಟ್‌ ಆಯ್ಕೆ

BREAKFAST RECIPE: ಹಿಟ್ಟು ಹುದುಗಿಸುವ ಅವಶ್ಯಕತೆಯೇ ಇಲ್ಲ- ಧಿಡೀರ್ ಉಪಾಹಾರಕ್ಕೆ ಟೊಮೆಟೊ ದೋಸೆ ಬೆಸ್ಟ್‌ ಆಯ್ಕೆ

ದಕ್ಷಿಣ ಭಾರತೀಯರ ಮನೆಗಳಲ್ಲಿ ದೋಸೆ ಎಂಬುದು ಅತ್ಯಂತ ಪ್ರಧಾನವಾದ ಉಪಾಹಾರ (Breakfast Recipe). ಸಾಮಾನ್ಯವಾಗಿ ದೋಸೆ ಎಂದರೆ ಅಕ್ಕಿ ಮತ್ತು ಬೇಳೆಯನ್ನು ನೆನೆಸಿ, ರುಬ್ಬಿ, ರಾತ್ರಿಯಿಡೀ ಹುದುಗುವಿಕೆಗೆ ಬಿಡಬೇಕಾಗುತ್ತದೆ. ಆದರೆ ಈ ಟೊಮೆಟೊ ದೋಸೆಯ (Tomato Dosa) ವಿಶೇಷತೆಯೆಂದರೆ ಇದಕ್ಕೆ ಯಾವುದೇ ಹುದುಗುವಿಕೆಯ ಅಗತ್ಯವಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ದಿಡೀರ್ ಎಂದು ಸಿದ್ಧಪಡಿಸಬಹುದಾದ ಈ ದೋಸೆ, ಬ್ಯಾಚುಲರ್ಸ್‌ಗೆ ಮತ್ತು ಕೆಲಸಕ್ಕೆ ಹೋಗುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಬೇಕಾಗುವ ಪದಾರ್ಥಗಳು:
* 3 ಟೊಮೆಟೊ
* 3 ಒಣಗಿದ ಕೆಂಪು ಮೆಣಸಿನಕಾಯಿ
* 1 ಇಂಚು ಶುಂಠಿ
* ½ ಕಪ್ ರವೆ
* ½ ಕಪ್ ಅಕ್ಕಿ ಹಿಟ್ಟು
* ¼ ಕಪ್ ಗೋಧಿ ಹಿಟ್ಟು
* 3 ಕಪ್ ನೀರು
* 1 ಸಣ್ಣಗೆ ಹೆಚ್ಚಿದ ಈರುಳ್ಳಿ
* 2 ಟೇಬಲ್ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
* 1 ಟೀಸ್ಪೂನ್ ಜೀರಿಗೆ
* ½ ಟೀಸ್ಪೂನ್ ಮೆಣಸಿನ ಪುಡಿ
* 1 ಟೀಸ್ಪೂನ್ ಉಪ್ಪು
* ಹುರಿಯಲು ಎಣ್ಣೆ

ಮಾಡುವ ವಿಧಾನ:
* ಮೊದಲಿಗೆ ಟೊಮೆಟೊ, ಒಣ ಮೆಣಸಿನಕಾಯಿ ಮತ್ತು ಶುಂಠಿಯ ನಯವಾದ ಪೇಸ್ಟ್ ಬೇಕಾಗುತ್ತದೆ.
* ಈ ಪೇಸ್ಟ್‌ಗೆ ಅಕ್ಕಿ ಹಿಟ್ಟು, ರವೆ ಮತ್ತು ಸ್ವಲ್ಪ ಗೋಧಿ ಹಿಟ್ಟನ್ನು ಸೇರಿಸಿ ನೀರು ದೋಸೆಯ ಹದಕ್ಕೆ ಕಲಸಿಕೊಳ್ಳಬೇಕು.
* ರುಚಿಯನ್ನು ಹೆಚ್ಚಿಸಲು ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ.
* ಈ ಮಿಶ್ರಣವನ್ನು ಒಂದು ಇಪ್ಪತ್ತು ನಿಮಿಷಗಳ ಕಾಲ ನೆನೆಯಲು ಬಿಟ್ಟರೆ, ರವೆಯು ನೀರನ್ನು ಹೀರಿಕೊಳ್ಳುತ್ತದೆ. ಮತ್ತು ದೋಸೆ ಅತ್ಯಂತ ಗರಿಗರಿಯಾಗಿ ಬರುತ್ತದೆ.
* ದೋಸೆ ಕಾವಲಿಯನ್ನು ಚೆನ್ನಾಗಿ ಕಾಯಿಸಿ, ಅದರ ಮೇಲೆ ನೀರು ದೋಸೆಯಂತೆ ಹಿಟ್ಟನ್ನು ಸುರಿದು, ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಹೀಗೆ ಮಾಡಿದರೆ ಕೆಂಪಾದ ಗರಿಗರಿಯಾದ ಟೊಮೆಟೊ ದೋಸೆ ಸಿದ್ಧವಾಗುತ್ತದೆ.
* ದೋಸೆಯಲ್ಲಿ ಟೊಮೆಟೊವಿನ ಹುಳಿ ಮತ್ತು ಮೆಣಸಿನ ಖಾರ ಇರುವುದರಿಂದ ಯಾವುದೇ ಚಟ್ನಿಯ ಅಗತ್ಯವಿಲ್ಲದೆ ಹಾಗೆಯೇ ತಿನ್ನಬಹುದು. ಒಂದು ವೇಳೆ ಬೇಕೆನಿಸಿದರೆ ತೆಂಗಿನಕಾಯಿ ಚಟ್ನಿ ಅಥವಾ ಮಸಾಲೆಯುಕ್ತ ಟೊಮೆಟೊ ಚಟ್ನಿಯೊಂದಿಗೆ ಸವಿಯಬಹುದು.

ಇದನ್ನೂ ಓದಿ : ಉಪಾಹಾರಕ್ಕೆ ಡಿಫರೆಂಟ್ ರುಚಿ- ಗರಿಗರಿಯಾದ ಎಲೆಕೋಸು ದೋಸೆ ಹೀಗೆ ತಯಾರಿಸಿ

ಹೆಚ್ಚಿನ ಸುದ್ದಿ

Change Language »
error: Content is protected !!