Saturday, May 16, 2026
Homeಕ್ರೀಡೆROHIT SHARMA : ರೋಹಿತ್ ಶರ್ಮಾಗೆ ವಿಶೇಷ ಗಿಫ್ಟ್ ನೀಡಿದ ನೀತಾ ಅಂಬಾನಿ

ROHIT SHARMA : ರೋಹಿತ್ ಶರ್ಮಾಗೆ ವಿಶೇಷ ಗಿಫ್ಟ್ ನೀಡಿದ ನೀತಾ ಅಂಬಾನಿ

ಮುಂಬೈ: ಐಪಿಎಲ್ 2026ರ (IPL) ಹೈ-ವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lsg) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಐತಿಹಾಸಿಕ ಜಯ ದಾಖಲಿಸಿದೆ. ಹ್ಯಾಮ್‌ಸ್ಟ್ರಿಂಗ್ ಗಾಯದ ಸಂಕಷ್ಟದಿಂದ ಮರಳಿದ ರೋಹಿತ್ ಶರ್ಮಾ (Rohit Sharma) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಈ ಸಂಭ್ರಮದ ನಡುವೆಯೇ ತಂಡದ ಮಾಲಕಿ ನೀತಾ ಅಂಬಾನಿ (Nita Ambani) ಅವರು ರೋಹಿತ್‌ಗೆ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಮೈದಾನದಲ್ಲಿ ಹಿಟ್ ಮ್ಯಾನ್ ಅಬ್ಬರ

ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಕಳೆದ ಐದು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಈ ಪಂದ್ಯದ ಮೂಲಕ ಕಿಕ್ಕಿರಿದು ತುಂಬಿದ್ದ ವಾಂಖೆಡೆ ಕ್ರೀಡಾಂಗಣಕ್ಕೆ ಅದ್ಧೂರಿಯಾಗಿ ಮರಳಿದರು. ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದ ರೋಹಿತ್, ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸುವ ಮೂಲಕ ಹಳೇ ಫಾರ್ಮ್‌ಗೆ ಮರಳುವ ಮುನ್ಸೂಚನೆ ನೀಡಿದರು.

ಇವರಿಗೆ ಸಾಥ್ ನೀಡಿದ ರಯಾನ್ ರಿಕೆಲ್ಟನ್ 32 ಎಸೆತಗಳಲ್ಲಿ 83 ರನ್ ಚಚ್ಚಿದರು. ಈ ಜೋಡಿಯು ಮೊದಲ ವಿಕೆಟ್‌ಗೆ 143 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಮುಂಬೈ ತಂಡ 229 ರನ್‌ಗಳ ಗುರಿಯನ್ನು ಅತ್ಯಂತ ಸುಲಭವಾಗಿ ತಲುಪಲು ನೆರವಾಯಿತು.

ವಿಶೇಷ ‘ಬೆಸ್ಟ್ ಪಾರ್ಟ್‌ನರ್‌ಶಿಪ್’ ಗಾಗಲ್ಸ್

ಮುಂಬೈ ಇಂಡಿಯನ್ಸ್ ತಂಡವು ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪದಕಗಳನ್ನು ನೀಡುವುದು ವಾಡಿಕೆ. ಆದರೆ, 2026ರ ಈ ಸೀಸನ್‌ನಲ್ಲಿ ನೀತಾ ಅಂಬಾನಿ ಅವರು ಹೊಸ ಸಂಪ್ರದಾಯವೊಂದನ್ನು ಆರಂಭಿಸಿದ್ದಾರೆ.

ಜಯದ ಸಂಭ್ರಮದಲ್ಲಿದ್ದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ನೀತಾ ಅಂಬಾನಿ ಅವರು, ಪಂದ್ಯದ ಶ್ರೇಷ್ಠ ಜೊತೆಯಾಟವಾಡಿದ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಅವರಿಗೆ ಸ್ಟೈಲಿಶ್ ಆದ “ಬೆಸ್ಟ್ ಪಾರ್ಟ್‌ನರ್‌ಶಿಪ್ ಗಾಗಲ್ಸ್” (ಕನ್ನಡಕ) ಉಡುಗೊರೆಯಾಗಿ ನೀಡಿದರು.

ರೋಹಿತ್ ಶರ್ಮಾ ನಗುತ್ತಲೇ ಈ ಕಲರ್ ಫುಲ್ ಕನ್ನಡಕವನ್ನು ಧರಿಸಿದಾಗ ಇಡೀ ಡ್ರೆಸ್ಸಿಂಗ್ ರೂಮ್ ಚಪ್ಪಾಳೆಯಿಂದ ಮೊಳಗಿತು. ರೋಹಿತ್ ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಿಟ್ ಮ್ಯಾನ್ ಕಮ್ ಬ್ಯಾಕ್ ಕಂಡು ಖುಷಿಯಾಗಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!