Monday, February 9, 2026
Homeಟಾಪ್ ನ್ಯೂಸ್NIRMALA SITHARAMAN : ಭಾರತ-ಪಾಕ್ ಸಂಘರ್ಷ, ಬ್ಯಾಂಕ್​​ಗಳಿಗೆ ಸಚಿವೆ ಸೀತಾರಾಮನ್ ಮಹತ್ವದ ಸೂಚನೆ

NIRMALA SITHARAMAN : ಭಾರತ-ಪಾಕ್ ಸಂಘರ್ಷ, ಬ್ಯಾಂಕ್​​ಗಳಿಗೆ ಸಚಿವೆ ಸೀತಾರಾಮನ್ ಮಹತ್ವದ ಸೂಚನೆ

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಸ್ತುತ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಯಾವುದೇ ಸಂಭವನೀಯ ಅಥವಾ ಬಿಕ್ಕಟ್ಟನ್ನು ಎದುರಿಸಲು ಸಂಪೂರ್ಣವಾಗಿ ಜಾಗರೂಕರಾಗಿರುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್​​ಗಳಿಗೆ ಸಲಹೆ ನೀಡಿದ್ದಾರೆ.

ಗ್ರಾಹಕರಿಗೆ ಯಾವ ಸಮಸ್ಯೆಯಾಗದಂತೆ ಸೇವೆಗಳನ್ನು ಒದಗಿಸುವ ಕುರಿತಾಗಿ ಖಚಿತಪಡಿಸಿಕೊಳ್ಳಿ ಮತ್ತು ಅಗತ್ಯವಾಗಿ ತುರ್ತು ಸಂದರ್ಭದಲ್ಲೂ ಸನ್ನದ್ಧರಾಗಿ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒಗಳೊಂದಿಗೆ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹಲವು ಮಹತ್ವದ ಸೂಚನೆಗಳನ್ನು ಕೊಟ್ಟಿದ್ದಾರೆ.

ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಯುಪಿಐನಂತಹ ಡಿಜಿಟಲ್ ಅಪ್ಲಿಕೇಶನ್‌ಗಳು ಸೇರಿದಂತೆ ಬ್ಯಾಂಕಿಂಗ್ ವಲಯದ ಕಾರ್ಯಾಚರಣೆ ಮತ್ತು ಸೈಬರ್ ಭದ್ರತಾ ಸಿದ್ಧತೆಯನ್ನು ಪರಿಶೀಲಿಸುವತ್ತ ಗಮನಹರಿಸಬೇಕು ಎಂದು ಸೂಚಿಸಿದ್ದಾರೆ.

ದೇಶಾದ್ಯಂತ ನಾಗರಿಕರಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಿಗೆ ಅಡೆತಡೆಯಿಲ್ಲದಂತೆ ಖಾತರಿ ಮಾಡಿಕೊಳ್ಳಲು, ಎಲ್ಲಾ ಬ್ಯಾಂಕ್‌ಗಳು ಸಂಪೂರ್ಣವಾಗಿ ಎಚ್ಚರಿಕೆಯಿಂದ ಸಂಭವನೀಯ ಬಿಕ್ಕಟ್ಟನ್ನು ಎದುರಿಸಲು ಸಿದ್ಧರಾಗಲು ಸಚಿವೆಯವರು ನಿರ್ದೇಶನ ನೀಡಿದ್ದಾರೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!