Monday, May 18, 2026
Homeಟಾಪ್ ನ್ಯೂಸ್NIPAH VIRUS: ಮತ್ತೆ ನಿಫಾ ವೈರಸ್‌ ಆತಂಕ- ಮಲಪ್ಪುರಂ ಮಹಿಳೆಯಲ್ಲಿ ಸೋಂಕು ದೃಢ

NIPAH VIRUS: ಮತ್ತೆ ನಿಫಾ ವೈರಸ್‌ ಆತಂಕ- ಮಲಪ್ಪುರಂ ಮಹಿಳೆಯಲ್ಲಿ ಸೋಂಕು ದೃಢ

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ 42 ವರ್ಷದ ಮಹಿಳೆಯೊಬ್ಬರಲ್ಲಿ ನಿಫಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಕುರಿತು ಮಾಹಿತಿ ನೀಡಿದ್ದಾರೆ.

ಮಹಿಳೆ ಪ್ರಸ್ತುತ ಪೆರಿಂಥಲ್ಮನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಮಹಿಳೆಗೆ ಜ್ವರವಿದ್ದು, ಕೆಮ್ಮು ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡಿವೆ.

ನಿಫಾ ಸೋಂಕು ಇರಬಹುದು ಎಂದು ಶಂಕಿಸಿ ಅವರ ರಕ್ತದ ಮಾದರಿಗಳನ್ನು ಪುಣೆಯ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯವು ಇದು ನಿಫಾ ಸೋಂಕಿನ ಪ್ರಕರಣ ಎಂದು ದೃಢಪಡಿಸಿದೆ.

ಇನ್ನು ಈ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಖಾತರಿ ಪಡಿಸಲು ತುರ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

2018ರಲ್ಲಿ ಕೇರಳದಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾಗಿದೆ. ಆ ಬಳಿಕ ಪ್ರತಿ ವರ್ಷವೂ ಕೇರಳದಲ್ಲಿ ನಿಫಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಈ ಸೋಂಕಿನ ನಿಖರ ಮೂಲವನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಹೆಚ್ಚಿನ ಸುದ್ದಿ

Change Language »
error: Content is protected !!