Sunday, January 25, 2026
Homeಟಾಪ್ ನ್ಯೂಸ್SHOCKING : ಖಿನ್ನತೆ, ಆತಂಕಗಳಿಂದ ಅಶ್ಲೀಲ ವಿಡಿಯೋ ವೀಕ್ಷಣೆ - ಅಪಾಯಕಾರಿ ಅಭ್ಯಾಸಕ್ಕೆ ಯುವಕರೇ ಹೆಚ್ಚು...

SHOCKING : ಖಿನ್ನತೆ, ಆತಂಕಗಳಿಂದ ಅಶ್ಲೀಲ ವಿಡಿಯೋ ವೀಕ್ಷಣೆ – ಅಪಾಯಕಾರಿ ಅಭ್ಯಾಸಕ್ಕೆ ಯುವಕರೇ ಹೆಚ್ಚು ಬಲಿ.!

ಸಾಮಾಜಿಕ ಮಾಧ್ಯಮಗಳ ಬಳಕೆ ಹೆಚ್ಚುತ್ತಿರುವುದು (Shocking) ಮತ್ತು ಡಿಜಿಟಲ್ ವೇದಿಕೆಗಳು ಸುಲಭವಾಗಿ ಲಭ್ಯವಾಗುತ್ತಿರುವುದರಿಂದ, ಕಳೆದ ಕೆಲವು ವರ್ಷಗಳಲ್ಲಿ ಅಶ್ಲೀಲ ವೀಡಿಯೊ (Porn Video) ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಅಭ್ಯಾಸಕ್ಕೆ ಹೆಚ್ಚು ವಯಸ್ಕರು ಒಳಗಾಗುತ್ತಿದ್ದಾರೆ ಎಂಬುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (Nimhans) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಭಾರತೀಯ ವಯಸ್ಕರಲ್ಲಿ ಅಶ್ಲೀಲ ವೀಡಿಯೊ ವೀಕ್ಷಣೆ ಎಂಬ ವಿಷಯದ ಮೇಲೆ ಎಂ. ರಾಜಶೇಖರ್, ಮನೋಜ್ ಕುಮಾರ್ ಶರ್ಮಾ ಮತ್ತು ಸೆಂಥಿಲ್ ಅಮುಧನ್ ಅವರು ನಡೆಸಿದ ಈ ಅಧ್ಯಯನವು ಜಿಯೋಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಅಧ್ಯಯನದ ಪ್ರಕಾರ, ಖಿನ್ನತೆ, ಆತಂಕ ಮತ್ತು ಮಾನಸಿಕ ಒತ್ತಡಗಳಿಂದ ಬಳಲುವ ವಯಸ್ಕರು ಅಶ್ಲೀಲ ವೀಡಿಯೊಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವೀಡಿಯೊಗಳು ಸುಲಭವಾಗಿ ದೊರೆಯುತ್ತಿರುವುದರಿಂದ ಈ ಪ್ರವೃತ್ತಿ ಇನ್ನಷ್ಟು ಹೆಚ್ಚುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಕಿರಿಯರೇ ಹೆಚ್ಚು:

ಅತಿಯಾಗಿ ಮತ್ತು ನಿಯಂತ್ರಣವಿಲ್ಲದೆ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುವುದರಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂಬುದು ಈ ಅಧ್ಯಯನದಿಂದ ದೃಢಪಟ್ಟಿದೆ. ವಿಶೇಷವಾಗಿ ಕಿರಿಯ ವಯಸ್ಸಿನವರೇ ಈ ವ್ಯಸನಕ್ಕೆ ಹೆಚ್ಚು ಒಳಗಾಗುತ್ತಿರುವುದು ಕಂಡುಬಂದಿದ್ದು, ಇದು ಅವರ ಶಿಕ್ಷಣ ಹಾಗೂ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಅಧ್ಯಯನಕ್ಕಾಗಿ ಕಳೆದ ಆರು ತಿಂಗಳ ಅವಧಿಯಲ್ಲಿ ಅಥವಾ ಪ್ರಸ್ತುತ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವ 18 ವರ್ಷ ಮೇಲ್ಪಟ್ಟವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ. 50.9 ವಿದ್ಯಾರ್ಥಿಗಳು, ಶೇ. 36.6 ಉದ್ಯೋಗಸ್ಥರು, ಶೇ. 8 ಸ್ವಯಂ ಉದ್ಯೋಗಿಗಳು, ಶೇ. 1.8 ಗೃಹಿಣಿಯರು ಮತ್ತು ಶೇ. 2.7 ಇತರ ವೃತ್ತಿಗಳಲ್ಲಿ ತೊಡಗಿಸಿಕೊಂಡವರು ಇದ್ದಾರೆ.

ಈ ಅಧ್ಯಯನವನ್ನು 2024ರ ಮಾರ್ಚ್‌ನಿಂದ ಜೂನ್‌ವರೆಗೆ 12 ವಾರಗಳ ಕಾಲ ಆನ್‌ಲೈನ್ ಮೂಲಕ ನಡೆಸಲಾಗಿದೆ. ಅಧ್ಯಯನದಲ್ಲಿ ಭಾಗವಹಿಸಲು ಒಟ್ಟು 236 ಮಂದಿ ಆಸಕ್ತಿ ತೋರಿದ್ದರು. 18ರಿಂದ 46 ವರ್ಷದೊಳಗಿನವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು. 

ಇದನ್ನೂ ಓದಿ : ಭಾರೀ ಪ್ರಮಾಣದ ಕೊಕೇನ್ ಸಾಗಾಟ – ಇಬ್ಬರು ಭಾರತೀಯರು ಯುಎಸ್‌ನಲ್ಲಿ ಅರೆಸ್ಟ್!

ಆದರೆ ಸಮೀಕ್ಷೆ ಆರಂಭಕ್ಕೂ ಮುನ್ನ 74 ಮಂದಿ ಹೊರನಡೆದರು. 45 ಮಂದಿ ಅಪೂರ್ಣ ಮಾಹಿತಿಯನ್ನು ನೀಡಿದ್ದರಿಂದ ಮತ್ತು ಐವರು ಅಪ್ರಾಪ್ತ ವಯಸ್ಕರಾಗಿದ್ದರಿಂದ ಅವರನ್ನು ಸಮೀಕ್ಷೆಯಿಂದ ಕೈಬಿಡಲಾಯಿತು. ಹೀಗಾಗಿ ಅಂತಿಮವಾಗಿ 112 ಮಂದಿಯ ಮಾಹಿತಿಯನ್ನು ಅಧ್ಯಯನಕ್ಕೆ ಬಳಸಲಾಗಿದೆ ಎಂದು ವರದಿ ಹೇಳಿದೆ.

ಪುರುಷರೇ ಹೆಚ್ಚು:

ಅಧ್ಯಯನದಲ್ಲಿ ಭಾಗವಹಿಸಿದವರ ಸರಾಸರಿ ವಯಸ್ಸು 25 ವರ್ಷ. ಅವರಲ್ಲಿ ಹೆಚ್ಚಿನವರು, ಅಂದರೆ ಶೇ. 81.3 ಮಂದಿ ಪುರುಷರಾಗಿದ್ದಾರೆ. ಶೈಕ್ಷಣಿಕ ಹಿನ್ನೆಲೆಯನ್ನು ನೋಡಿದರೆ, ಶೇ. 42 ಮಂದಿ ಪದವೀಧರರು. ಶೇ. 26.8 ಮಂದಿ ಸ್ನಾತಕೋತ್ತರ ಪದವೀಧರರು. ಶೇ. 12.5 ಮಂದಿ 12ನೇ ತರಗತಿಯಲ್ಲಿ ಓದುತ್ತಿದ್ದಾರೆ.

ಇನ್ನು ಎಂ.ಫಿಲ್ ಮತ್ತು ಪಿಎಚ್.ಡಿ ಪದವೀಧರರು ಶೇ. 8.92 ಇದ್ದರೆ, ಇತರೆ ಶೈಕ್ಷಣಿಕ ಅರ್ಹತೆ ಹೊಂದಿರುವವರು ಶೇ. 1.8 ಮಾತ್ರ ಎಂದು ಈ ಅಧ್ಯಯನದ ಮೂಲಕ ತಿಳಿದು ಬಂದಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!