ಬೆಂಗಳೂರು: ಕರ್ನಾಟಕದಷ್ಟೇ ಅಲ್ಲ, ಭಾರತದ ಪ್ರತಿಷ್ಠಿತ ಸೋಪ್ ಆದ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರವೇ 2 ವರ್ಷ 2 ದಿನಗಳ ಅವಧಿಗೆ ತಮನ್ನಾ ಅವರನ್ನು ರಾಯಭಾರಿಯಾಗಿ ಆಯ್ಕೆಮಾಡಿದ್ದು, ಬರೋಬ್ಬರಿ 6.2 ಕೋಟಿ ರೂಪಾಯಿಗಳ ಸಂಭಾವನೆ ನೀಡಿದೆ. ಇದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿದೆ. ಇದೀಗ ತಮನ್ನಾ ನೇಮಕಕ್ಕೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಿಖಿಲ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಕರ್ನಾಟಕದಲ್ಲಿ ರಾಯಭಾರಿಗಳಾಗುವ ಅರ್ಹತೆ ಹೊಂದಿರುವ ಮತ್ಯಾರು ಕನ್ನಡದ ನಟ-ನಟಿಯರು ಸಿಗಲಿಲ್ಲವೇ? ಅಥವಾ ಡಿ.ಕೆ ಶಿವಕುಮಾರ್ರವರ ನಟ್ಟು – ಬೋಲ್ಟು ಧಮ್ಕಿಗೆ ಹೆದರದಿದ್ದಕ್ಕಾಗಿ ಶಿಕ್ಷೆಯೋ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಪ್ರಮುಖ ಇಲಾಖೆ/ಮಂಡಳಿಗಳೆಲ್ಲ ನಷ್ಟ ಅನುಭವಿಸುತ್ತಿರುವ ಸಮಯದಲ್ಲಿ, ಲಾಭದಲ್ಲಿರುವ ರಾಜ್ಯದ ಹೆಮ್ಮೆಯ ಸಂಸ್ಥೆಯಾದ @MysoreSandalIn ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಯ ಮೇಲೆ ಸರ್ಕಾರದ ವಕ್ರ ದೃಷ್ಟಿ ಬಿದ್ದಿದೆ.
ಕೆ.ಎಂ.ಎಫ್. ಹಾಗೂ ಇತರೆ ಸಂಸ್ಥೆಗಳಿಗೆ ಅಪ್ಪು-ಶಿವಣ್ಣ ಅವರಂತಹ ಮೇರು ನಟರನ್ನೇ… pic.twitter.com/U4lhNoaTOu
— Nikhil Kumar (@Nikhil_Kumar_k) May 22, 2025
ಎಕ್ಸ್‌ನಲ್ಲೇನಿದೆ..?: ಕರ್ನಾಟಕದ ಪ್ರಮುಖ ಇಲಾಖೆ/ಮಂಡಳಿಗಳೆಲ್ಲ ನಷ್ಟ ಅನುಭವಿಸುತ್ತಿರುವ ಸಮಯದಲ್ಲಿ, ಲಾಭದಲ್ಲಿರುವ ರಾಜ್ಯದ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಯ ಮೇಲೆ ಸರ್ಕಾರದ ವಕ್ರ ದೃಷ್ಟಿ ಬಿದ್ದಿದೆ.
ಕೆ.ಎಂ.ಎಫ್. ಹಾಗೂ ಇತರೆ ಸಂಸ್ಥೆಗಳಿಗೆ ಅಪ್ಪು-ಶಿವಣ್ಣ ಅವರಂತಹ ಮೇರು ನಟರನ್ನೇ ರಾಯಭಾರಿಗಳನ್ನಾಗಿ ಮಾಡಿದ್ದು ನಮೆಲ್ಲರ ಹೆಮ್ಮೆ. ಈ ರಾಯಭಾರಿಗಳೆಲ್ಲರೂ ಸರ್ಕಾರದ ಸಂಸ್ಥೆಗಳಿಗಾಗಿ ಉಚಿತವಾಗಿ ಪ್ರಾಯೋಜಿಕತೆಯನ್ನು ನೀಡಿದ್ದು ಕನ್ನಡಿಗರ ಹೃದಯ ವಿಶಾಲತೆಯನ್ನು ತೋರಿಸುತ್ತದೆ.
ಆದರೆ, ಇದೀಗ ಕರ್ನಾಟಕ ಸೋಪ್ ಅಂಡ್ ಡಿಟರ್ಜೆಂಟ್ ಲಿ. (ಸ್ಯಾಂಡಲ್ ಸೋಪ್) ಮಂಡಳಿಗೆ ರಾಯಭಾರಿಯನ್ನಾಗಿ ಪರಭಾಷಿಕ ನಟಿಯೋರ್ವರನ್ನು 6.5 ಕೋಟಿ ಮೊತ್ತಕ್ಕೆ ನೇಮಕ ಮಾಡಿರುವುದು ಖಂಡನೀಯ. ಕರ್ನಾಟಕದಲ್ಲಿ ರಾಯಭಾರಿಗಳಾಗುವ ಅರ್ಹತೆ ಹೊಂದಿರುವ ಮತ್ಯಾರು ಕನ್ನಡದ ನಟ-ನಟಿಯರು ಸಿಗಲಿಲ್ಲವೇ? ಅಥವಾ ಡಿ.ಕೆ ಶಿವಕುಮಾರ್ರವರನಟ್ಟು – ಬೋಲ್ಟು ಧಮ್ಕಿಗೆ ಹೆದರದಿದ್ದಕ್ಕಾಗಿ ಶಿಕ್ಷೆಯೋ? ಎಂದು ನಿಖಿಲ್ ಬರೆದುಕೊಂಡಿದ್ದಾರೆ.