ಬೆಂಗಳೂರು: ಕೆಂಡೆ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡುವೆ ವಾಕ್ಸಮರ ಜೋರಾಗಿದ್ದು, ಈ ಮಧ್ಯೆ ಜೆಡಿಎಸ್ (JDS) ಬಿಜೆಪಿ ಜೊತೆಗೆ ವಿಲೀನ ಆಗಲಿ ಎಂಬ ಡಿಕೆ ಶಿವಕುಮಾರ್ ಮಾತಿಗೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕೌಂಟರ್ ಕೊಟ್ಟಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂದು ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರ ಪ್ರಕರಣ, ಇದು ಟೆಂಗಿನಕಾಯಿ ಟೂಲ್ಕಿಟ್ ಎಂದ ‘ಕೈ’ ಮುಖಂಡ
ಡಿಕೆ ಶಿವಕುಮಾರ್ ಅವರು ಜೆಡಿಎಸ್ ಭವಿಷ್ಯದ ಬಗ್ಗೆ ಮಾತಾಡೋ ಮೊದಲು ಪ್ರಸ್ತುತ ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ನೋಡಿಕೊಳ್ಳಲಿ. 2028 ಕ್ಕೆ ಬಿಜೆಪಿ-ಜೆಡಿಎಸ್ ಕನಿಷ್ಠ 150 ಸ್ಥಾನ ಗೆಲ್ಲಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ-ಜೆಡಿಎಸ್ ಬದ್ಧತೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್ ಶಕ್ತಿ ಏನು ಅಂತ ಲೋಕಸಭೆ ಚುನಾವಣಾ ಫಲಿತಾಂಶಗಳಲ್ಲೇ ಗೊತ್ತಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಬಿಜೆಪಿ ನಡುವೆ ಯುದ್ಧ ಇರಲಿ, ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾದ್ರೆ ಒಳ್ಳೆಯದು ಎಂಬ ಡಿಕೆಶಿ ಹೇಳಿಕೆಗೆ ಕೌಂಟರ್ ಕೊಟ್ಟ ನಿಖಿಲ್, 2 ಪಾರ್ಟಿ ಸಿಸ್ಟಮ್ ಯಾರಿಗೆ ಅನುಕೂಲ ಆಗುತ್ತದೆ? ಡಿಕೆ ಶಿವಕುಮಾರ್ ಗಾ? ಎಂದು ಮಾರ್ಮಿಕವಾಗಿ ಕಾಲೆಳೆದಿದ್ದಾರೆ.