ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಿದ್ದ ಕ್ರಮವನ್ನು ಹೆದ್ದಾರಿ ಪ್ರಾಧಿಕಾರ ಹಿಂಪಡೆದಿದೆ. ಪ್ರಾರಂಭವಾದ ಇಪ್ಪತ್ತು ದಿನಗಳಿಗೂ ಮುನ್ನವೇ ವಾರ್ಷಿಕ ಶುಲ್ಕ ಪರಿಷ್ಕರಣೆಯ ನೆಪದಲ್ಲಿ ಶುಲ್ಕ ಹೆಚ್ಚಳ ಮಾಡಿದ್ದ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಮೈಸೂರು ಸಂಸದ ಪ್ರತಾಪ್ ಸಿಂಹ ಮುಂತಾದವರು ಈ ಬಗ್ಗೆ ಪ್ರತಿಕ್ರಿಯಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದರು. ಜನರೂ ಸಹ ಈ ಬಗ್ಗೆ ತೀವ್ರವಾದ ಖಂಡನೆ ವ್ಯಕ್ತಪಡಿಸಿದ್ದರು. ಜನಾಕ್ರೋಶಕ್ಕೆ ಮಣಿದ ಹೆದ್ದಾರಿ ಪ್ರಾಧಿಕಾರ ಶುಲ್ಕ ಹೆಚ್ಚಳ ಕ್ರಮವನ್ನು ಮುಂದೂಡಿರುವುದಾತಿ ತಿಳಿಸಿದೆ.