ಬೀದರ್ : ವೈದ್ಯರು ಎಡವಟ್ಟಿನಿಂದ ನವಜಾತ ಶಿಶುವಿನ ಕಾಲಿನ ಮೂಳೆ ಮುರಿತವಾಗಿ ಮಗು ಹುಟ್ಟುವ ಮುನ್ನವೇ ಅಂಗ ವೈಕಲ್ಯಕ್ಕೆ ತುತ್ತಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸುವ ವೇಳೆ ವೈದ್ಯರು ಈ ಎಡವಟ್ಟು ಮಾಡಿದ್ದು, ಹೆರಿಗೆ ನಂತರ ಸ್ಕ್ಯಾನಿಂಗ್ ಮಾಡಿಸಿದಾಗ ಮಗುವಿನ ಬಲಗಾಲಿನ ತೊಡೆ ಮೂಳೆ ಮುರಿದಿರುವುದು ಬೆಳಕಿಗೆ ಬಂದಿದೆ.
ಹೀಗೆ ಮೂಳೆ ಮುರಿತ ಆಗಿರುವುದರಿಂದ ಪಾಪದ ಒಂದು ತಿಂಗಳ ಹಸುಗೂಸು ನೋವು ಸಹಿಸಲಾಗದೆ ನರಳುತ್ತಿದೆ. ಮಗುವಿನ ಸ್ಥಿತಿ ನೋಡಿ ಮರುಕ ಪಡುತ್ತಿರುವ ಬಡ ಕುಟುಂಬ ಚಿಕಿತ್ಸೆ ಕೊಡಿಸಲು ಕೂಡ ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಇನ್ನೆಲ್ಲಿ ಶಾಶ್ವತ ಅಂಗವೈಕಲ್ಯ ಮಗುವನ್ನು ಕಾಡಬಹುದೋ ಎಂಬ ಆತಂಕ ಕುಟುಂಬಸ್ಥರಲ್ಲಿ ಮನೆಮಾಡಿದೆ.
2024ರ ಡಿ.14ರಂದು ಬೀದರ್‌ನ ರೂಪಾರಾಣಿ ಮಡಿವಾಳ ಎಂಬಾಕೆ ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಆ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದರು.ಆದ್ರೆ ಹೆರಿಗೆಯ ವೇಳೆ ಬ್ರಿಮ್ಸ್ ಸಿಬ್ಬಂದಿ ಮಗುವಿನ ಮೂಳೆಯನ್ನೇ ಮುರಿದು ಹಾಕಿದ್ದಾರೆ.
ಆದ್ರೆ ಮಗುವಿನ ಹೆರಿಗೆಗೆ ಮುನ್ನ ಮಗು ತಾಯಿಯ ಗರ್ಭದಲ್ಲಿ ಮಗು ಉಲ್ಟಾ ಇರುವುದನ್ನ ಕುಟುಂಬಸ್ಥರು ಗಮಸಿದ್ದು ಇದನ್ನು ವೈದ್ಯರ ಗಮನಕ್ಕೆ ತಂದಿದ್ದಾರೆ. ಹೀಗಾಗಿ ನಾರ್ಮಲ್ ಡೆಲಿವರಿ ಬೇಡ, ದಯವಿಟ್ಟು ಬೇಡ ಸಿಜರಿಯನ್ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಆದ್ರೆ ಈ ವೇಳೆ ನಿರ್ಲಕ್ಷ್ಯ ತೋರಿರುವ ವೈದ್ಯರು, ಕುಟುಂಬಸ್ಥರ ಮಾತನ್ನು ಬದಿಗಿಟ್ಟು ನಾರ್ಮಲ್ ಡೆಲಿವರಿ ಮಾಡಿದ್ದಾರೆ. ಈ ವೇಳೆ ಮಗುವಿನ ಬಲಗಾಲಿನ ತೊಡೆಯ ಮೂಳೆ ಮುರಿದಿದೆ. ಅನುಮಾನಗೊಂಡ ಕುಟುಂಬಸ್ಥರು
ಹೆರಿಗೆಯ ಬಳಿಕ ಸ್ಕ್ಯಾನಿಂಗ್ ಮಾಡಿಸಿದ್ದು ಶಿಶುವಿನ ಬಲಗಾಲ ಮೂಳೆ ಮುರಿದಿರುವುದು ಗೊತ್ತಾಗಿದ್ದು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.